ಹರಿಹರ, ನ.8- ನಗರದ ಪಶು ಸಂಗೋಪನಾ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ನೀಡಲಾದ ಮೇವು ಕಟಾವು ಯಂತ್ರ ಸೇರಿದಂತೆ ಪಶು ಉಪಕರಣಗಳನ್ನು ಶಾಸಕ ಬಿ.ಪಿ.ಹರೀಶ್ ರೈತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆ ನಿರ್ದೇಶಕ ಸಿದ್ದೇಶ್, ನಗರಸಭಾ ಸದಸ್ಯ ಹನುಮಂತಪ್ಪ, ರೈತರಾದ ಮಹದೇವಪ್ಪ, ಪೂಜಾರ್, ನವೀನ್ ಮತ್ತಿತರರು ಹಾಜರಿದ್ದರು.
ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ವಿತರಣೆ
