ಕನ್ನಡ ನೆಲ, ಜಲದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಕನ್ನಡ ನೆಲ, ಜಲದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಆವರಗೆರೆ ವಾಸು

ದಾವಣಗೆರೆ, ನ. 8 –  ಕನ್ನಡ  ನೆಲ, ಜಲ, ಭಾಷೆ  ರಕ್ಷಣೆ ಮಾಡುವ   ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು  ಎ.ಐ.ವೈ.ಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಕರೆ ನೀಡಿದರು. ಆವರಗೆರೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು,   ಕನ್ನಡಿಗರು ಎಲ್ಲೇ ಇರಲಿ ನವೆಂಬರ್ 1ರಂದು ರಾಜ್ಯೋತ್ಸವವನ್ನು ಆಚರಿಸುತ್ತಾರೆ.  1956ಕ್ಕೂ ಮೊದಲು ಕನ್ನಡ ನಾಡಿಗೆ ಮೈಸೂರು ರಾಜ್ಯ ಎಂದೇ ಹೆಸರಿತ್ತು. ನಂತರ  ಕರ್ನಾಟಕ ಎಂದು ಹೆಸರಿಡಲಾಯಿತು.  ರಾಜ್ಯದ ನೆಲ, ಜಲ, ಭಾಷೆಗೆ ಕುತ್ತು ಬಂದರೆ   ಕನ್ನಡಿಗ ಯುವಕರು ಕಾಪಾಡುವ ಜವಾಬ್ದಾರಿ ಹೊರಬೇಕು ಎಂದು ವಾಸು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಕೆರೆಯಾಗಳಹಳ್ಳಿ ರಾಜು, ನಾಗರಾಜ, ಸಿದ್ದೇಶ್, ಕಾರ್ತಿಕ, ಸಂತೋಷ, ದರ್ಶನ್, ಕಿಟ್ಟಿ, ಸತೀಶ, ರಂಗಸ್ವಾಮಿ, ಡಾಲಿ ಬಸವರಾಜ್ ಭಾಗವಹಿಸಿದ್ದರು.

error: Content is protected !!