ದಾವಣಗೆರೆ, ನ. 8- ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಜೆಐಟಿಡಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮೇಷನ್ ಸೈನ್ಸಸ್ ನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಬೆಳಗಾವಿ ವಿಟಿಯು ಉಪಕುಲಪತಿ ಡಾ. ಎಸ್. ವಿದ್ಯಾಶಕರ್ ಕಾರ್ಯಕ್ರಮ ಉದ್ಘಾಟಿಸಿದರು. ಜೈನ್ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್, ಡಾ. ಸಂತೋಷ್ ಹೇರೂರ್, ಡಾ. ಎನ್. ಪೃಥ್ವಿರಾಜ್, ಪ್ರೊ. ಜಿ.ಪಿ. ರಘುದತ್ತ, ಪ್ರೊ. ಬಿ. ರವಿತೇಜ, ಡಾ. ರಾಜೇಂದ್ರ ಸೊಲೊನಿ ಮತ್ತು ಪ್ರೊ. ಹೆಚ್.ಬಿ. ಶರಣಬಸವೇಶ್ವರ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.