ಕುಂಬಳೂರು : ತಾ. ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿಕ್ಷಕರಿಗೆ ರಾಜಶೇಖರ್ ಕರೆ
ಮಲೇಬೆನ್ನೂರು, ನ. 8 – ಮಕ್ಕಳಿಗೆ ಪಠ್ಯದ ವಿಷಯಗಳನ್ನು ಕಲಿಸುತ್ತಾ, ಪಠ್ಯೇತರ ವಿಷಯಗಳನ್ನು ಗೌಣ ಮಾಡಬೇಡಿ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ರಾಜಶೇಖರ್ ಶಿಕ್ಷಕರಿಗೆ ಹೇಳಿದರು.
ಅವರು ಮಂಗಳವಾರ ಕುಂಬಳೂರು ಹೊರ ವಲಯದಲ್ಲಿರುವ ಚಿಟ್ಟಕ್ಕಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಹರಿಹರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.
ಮಕ್ಕಳಲ್ಲಿರುವ ವ್ಯಕ್ತಿತ್ವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ರೂಪಿಸಿದ್ದು, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಆಕಸ್ತಿಯಿಂದ ಮಾಡಬೇಕು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಕ್ಷಪಾತ ಮಾಡದೇ, ಶಾಲೆಯನ್ನು ನೋಡದೇ ಮಕ್ಕಳ ಪ್ರತಿಭೆಯನ್ನು ಗಮನಿಸಿ, ಸರಿಯಾದ ತೀರ್ಪು ನೀಡಿ ಎಂದು ರಾಜಶೇಖರ್ ಅವರು ತೀರ್ಪುಗಾರರಿಗೆ ಕಿವಿಮಾತು ಹೇಳಿದರು.
ಎಸ್‌ಡಿಎಲ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಮಲೇಬೆನ್ನೂರು ಪುರಸಭೆಯ ಮಾಜಿ ಸದಸ್ಯ ಮಹಾಂತೇಶ್ ಸ್ವಾಮಿ ಮಾತನಾಡಿ, ಸೋಲು-ಗೆಲುವಿಗಿಂತ ಮಕ್ಕಳು ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದರು.
ಎಸ್‌ಡಿಎಲ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಕೆ.ಕುಮಾರ್ ಮಾತನಾಡಿದರು. ಎಸ್‌ಡಿಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ವರ್ತಕ ಚಿಟ್ಟಕ್ಕಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಸಿಆರ್‌ಪಿಗಳಾದ ನಂಜುಂಡಪ್ಪ, ಬಸವರಾಜಯ್ಯ, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ, ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭಾನುವಳ್ಳಿ ನಾಗರಾಜ್, ಅಂಗವಿಕಲ ನೌಕರರ ಸಂಘದ ಮುಕುಂದಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಭೀಮಪ್ಪ, ಸರ್ಕಾರಿ ನೌಕರರ ಸಂಘದ ಸಾಕಮ್ಮ, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ, ಪಿಡಬ್ಲ್ಯೂಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಶಿಕ್ಷಕರಾದ ಪದ್ದಪ್ಪ, ಬೀರಪ್ಪ, ಹನುಮಂತಪ್ಪ, ಗದಿಗೆಪ್ಪ, ಮಂಜಪ್ಪ, ತಿಪ್ಪೇಸ್ವಾಮಿ, ಚಿಟ್ಟಕ್ಕಿ ಶಾಲೆ ಪ್ರಿನ್ಸಿಪಾಲ್ ಚೇತನ್, ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ಮಂಜುನಾಥ ಆಡಿನ, ಸಹಾಯಕ ನೋಡೆಲ್ ಅಧಿಕಾರಿ ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಕ್ಷೇತ್ರ ಸಮಾನ್ವಯಾಧಿಕಾರಿ ಹೆಚ್.ಕೃಷ್ಣಪ್ಪ ಅವರು ಸ್ವಾಗತಿಸಿದರು.
ಸಂಜೆ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.