ದಾವಣಗೆರೆ, ನ. 8 – ಧಾರವಾಡದಲ್ಲಿ ಮೊನ್ನೆ ನಡೆದ ಓಪನ್ ನ್ಯಾಷ ನಲ್ ಮಾಸ್ಟರ್ ಗೇಮ್ಸ್ 2023ರಲ್ಲಿ ವೇಯ್ಟ್ ಲಿಫ್ಟಿಂಗ್‌ನಲ್ಲಿ ಸ್ಥಳೀಯ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಎಸ್.ಕೆ. ಪಾಂಡುರಾಜ್ ಅವರು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪಾಂಡುರಾಜ್, 2001 ರಲ್ಲಿ ಬೆಸ್ಟ್ ವೇಯ್ಟ್ ಲಿಫ್ಟರ್ ಅವಾರ್ಡ್ ಪುರಸ್ಕೃತರಾಗಿದ್ದರು. ಪಾಂಡುರಾಜ್ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು ಅಭಿನಂದಿಸಿದ್ದಾರೆ.
ಎಸ್.ಕೆ. ಪಾಂಡುರಾಜ್ ಅವರಿಗೆ ವೇಯ್ಟ್ ಲಿಫ್ಟಿಂಗ್‌ನಲ್ಲಿ ಪ್ರಥಮ ಸ್ಥಾನ
