ದಾವಣಗೆರೆ, ನ. 8 – ನಗರದ ಗುಡಿಗೋಪುರಗಳ ಶಿಲ್ಪಿ ಟಿ. ಶಿವಶಂಕರ್ ಅವರಿಗೆ ರಾಜ್ಯ ಸರ್ಕಾರದಿಂದ ಕೊಡ ಮಾಡುವ ಪ್ರತಿಷ್ಠಿತ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವರಾಜ್ ತಂಗಡಗಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉಪಸ್ಥಿತರಿದ್ದರು. ಟಿ. ಶಿವಶಂಕರ್ ಇವರು ಸುಮಾರು ಮೂರು ದಶಕಗಳಿಂದ ತಂದೆ – ಶಿಲ್ಪಿ ತಿಮ್ಮಪ್ಪನವರ ಜೊತೆಯಲ್ಲಿ ಜೀವನೋಪಾಯಕ್ಕಾಗಿ ಪ್ರಾರಂಭ ಮಾಡಿ ಯಾವುದೇ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯದೇ, ತಂದೆಯವರ ಜೊತೆಯಲ್ಲಿ ಕಲಿತ ಶಿಲ್ಪ ನಿರ್ಮಾಣ ಇಂದು ರಾಜ್ಯ, ಹೊರರಾಜ್ಯಗಳಲ್ಲೂ ಇವರ ಶಿಲ್ಪ ಕಲೆಗಳು ಪ್ರಸಿದ್ದಯಾಗಿವೆ.
ಶಿಲ್ಪಿ ಟಿ. ಶಿವಶಂಕರ್ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
