ದಾವಣಗೆರೆ, ನ. 8 – ಈಚೆಗೆ ಲಕ್ಷ್ಮೇಶ್ವರದಲ್ಲಿ ನಡೆದ 8ನೇ ಆಲ್ ಇಂಡಿಯಾ ಶೈನ್ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ದಾವಣಗೆರೆಯ ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಸೆಲ್ಸ್ ಡಿಫೆನ್ಸ್ ಆರ್ಗನೈಷನ್ ಶಾಲೆಯ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಪ್ರಥಮ ಸ್ಥಾನವನ್ನು ಗಣೇಶ, ಭವ್ಯ ಜೈನ್, ರಾಘವಿ ಹಾಗೂ ತೃತೀಯ ಸ್ಥಾನವನ್ನು ಆದಿತ್ಯ, ಅಫಾನ್ ಇವರುಗಳು ಪಡೆದಿರುತ್ತಾರೆ ಎಂದು ತರಬೇತುದಾರ ಸನ್‌ಶೈಮ್ ನಜೀರ್ ತಿಳಿಸಿದ್ದಾರೆ.