ಹರಿಹರ : ದೊಡ್ಡಿ ಬೀದಿಯ ಬಡಾವಣೆಯಲ್ಲಿ ಕಟ್ಟಿಕೊಂಡ ಚರಂಡಿ

ಹರಿಹರ : ದೊಡ್ಡಿ ಬೀದಿಯ ಬಡಾವಣೆಯಲ್ಲಿ ಕಟ್ಟಿಕೊಂಡ ಚರಂಡಿ

ಹರಿಹರ, ನ, 7- ನಗರದಲ್ಲಿ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ದೊಡ್ಡಿ ಬೀದಿಯ  ಬಡಾವಣೆಯಲ್ಲಿ ಚರಂಡಿ ಕಟ್ಟಿಕೊಂಡು ದೊಡ್ಡಿ ಬೀದಿ ಮತ್ತು ತೆಗ್ಗಿನಕೇರಿ ಬಡಾವಣೆಯ ನಿವಾಸಿಗಳ ಮನೆಗಳಿಗೆ ಮಳೆಯ ನೀರು ನುಗ್ಗಿದ ಪರಿಣಾಮ, ಮನೆಯಲ್ಲಿ ಇದ್ದಂತಹ ನೀರನ್ನು ಹೊರಗಡೆ ಸಾಗಿಸಲು ನಿವಾಸಿಗಳು ಹರಸಾಹಸ ಪಡಬೇಕಾಯಿತು. 

ಇಂದು ನಗರಸಭೆಯ ಸಿಬ್ಬಂದಿಗಳು ಜೆಸಿಬಿ ಯಂತ್ರದ ಮೂಲಕ ಚರಂಡಿಯಲ್ಲಿ ಕಟ್ಟಿಕೊಂಡಿದ್ದ ಕಸವನ್ನು ತೆಗೆದು ಚರಂಡಿ ದುರಸ್ತಿ ಪಡಿಸಿದರು. 

error: Content is protected !!