ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ, ಮನವಿ ಸಲ್ಲಿಕೆ

ದಾವಣಗೆರೆ, ನ. 7- ತೆಂಗು ಬೆಳೆಗಾರರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಧಾವಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ  ಜಿಲ್ಲಾ ಸಮಿತಿ ವತಿಯಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರವು ಒಬ್ಬರಿಗೆ ಪ್ರತಿ ಕ್ವಿಂಟಾಲ್‍ಗೆ ರೂ.20,000 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.  ರಾಜ್ಯ ಸರ್ಕಾರದಿಂದ ಒಬ್ಬರಿಗೆ ಪ್ರತಿ ಕ್ವಿಂಟಾಲ್‍ಗೆ ರೂ.5,000  ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.

ಜಿಲ್ಲೆಯಲ್ಲಿ ತೆಂಗು ಬೆಳೆಯುವಂತಹ ಪ್ರದೇಶವನ್ನು ಗುರುತಿಸಿ ಅಲ್ಲಿ ತೆಂಗು ಉತ್ಪನ್ನಗಳ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ತೆಂಗು ಸಂರಕ್ಷಣಾ ಗೋದಾಮುಗಳನ್ನು ಸ್ಥಾಪಿಸಬೇಕು.  ಪ್ರತಿ ಹೋಬಳಿಗೆ ಸರ್ಕಾರದ ಒಂದು ಖರೀದಿ ಕೇಂದ್ರವನ್ನು ತೆರೆಯಬೇಕು. ರಾಜ್ಯ ಸರ್ಕಾರ ತೆಂಗಿನಕಾಯಿ ಮತ್ತು ಕೊಬ್ಬರಿಯನ್ನು ಖರೀದಿಸಿ ಪಡಿತರ ಜನತಾ ಬಜಾರ್ ಮೂಲಕ ಜನರಿಗೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಎ.ಐ.ಕೆ.ಕೆ.ಎಂ.ಎಸ್.ನ ರಾಷ್ಟ್ರೀಯ ನಾಯಕ ಡಾ|| ಟಿ.ಎಸ್. ಸುನಿತ್‍ಕು ಮಾರ್, ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ಗಳಾದ ನಾಗಸ್ಮಿತಾ, ಮಂಜುನಾಥ್ ರೆಡ್ಡಿ, ನಾಗರಾಜ್ ರಾಮಗೊಂಡನಹಳ್ಳಿ, ಹನುಮಂತಪ್ಪ, ಸಿದ್ದೇಶ್ ಆನಗೋಡು, ನಿಂಗಪ್ಪ ಅಸ ಗೋಡು, ಮಂಜುನಾಥ್ ಮ್ಯಾಸರಹಳ್ಳಿ ಇತರರು  ಭಾಗವಹಿಸಿದ್ದರು.

error: Content is protected !!