ಅನ್‍ಮೋಲ್‌ನಲ್ಲಿ ರಾಜ್ಯೋತ್ಸವ

ಅನ್‍ಮೋಲ್‌ನಲ್ಲಿ ರಾಜ್ಯೋತ್ಸವ

ದಾವಣಗೆರೆ, ನ. 7 – ಶಿರಮಗೊಂಡನಹಳ್ಳಿಯ ಅನ್‍ಮೋಲ್ ಪಬ್ಲಿಕ್ ಶಾಲೆಯಲ್ಲಿ ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಯು. ಕೊಟ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕನ್ನಡ ಸಹ ಶಿಕ್ಷಕಿ ಟಿ.ಹೆಚ್. ಸಂಗೀತ ಮಾತನಾಡಿ, ಕನ್ನಡ ನಾಡು ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ. ನಾವೆಲ್ಲರೂ ಕನ್ನಡಿಗರೆನ್ನುವುದರ ಬಗ್ಗೆ ನಮಗೆ ಹೆಮ್ಮೆಯಿರಬೇಕು. ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡಬೇಕು, ಬರೆಯಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡೇತರರಿಗೆ ನಾವು ಕನ್ನಡ ಕಲಿಸಬೇಕು. ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರಬೇಕು ಎಂದು ತಿಳಿಸಿದರು.

error: Content is protected !!