ದಾವಣಗೆರೆ, ನ. 6 – ಶಾಲಾ ಶಿಕ್ಷಣ ಇಲಾಖೆಯಿಂದ ಚಿಕ್ಕೋಡಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ 14 ವರ್ಷ ವಯೋಮಾನದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲಾ ತಂಡವು ಬೆಂಗಳೂರು ವಿಭಾಗ ಮಟ್ಟದಿಂದ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿರುತ್ತದೆ.
ಸೇಂಟ್ ಜಾನ್ಸ್ ಶಾಲೆಯ ಟಿ. ಸುಹಾನ್, ಜೈನ್ ವಿದ್ಯಾಲಯದ ಆರ್. ಶಿವರಾಜ್ ಹಾಗೂ ಸೈಯ್ಯದ್ ಉಮರ್, ವಿಜ್ಞಾನ್ ಇಂಟರ್‌ನ್ಯಾಷನಲ್ ಶಾಲೆಗಳ ಮೂವರು ವಿದ್ಯಾರ್ಥಿಗಳು ಬಿಹಾರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ತರಬೇತುದಾರರಾದ ತಿಮ್ಮೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್ ತಿಳಿಸಿದ್ದಾರೆ.