ನಗರದಲ್ಲಿ ಇಂದು-ನಾಳೆ ನಾಟಕೋತ್ಸವ

ನಗರದಲ್ಲಿ ಇಂದು-ನಾಳೆ ನಾಟಕೋತ್ಸವ

ನೀವು-ನಾವು ಸಾಂಸ್ಕೃತಿಕ ವೇದಿಕೆ, ಅನ್ವೇಷಕರು ಆರ್ಟ್ಸ್‌ ಫೌಂಡೇಶನ್‌ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ 7 ಮತ್ತು ನಾಳೆ 8 ರಂದು ನಾಟಕೋತ್ಸವ ಹಾಗೂ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭವನ್ನು ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ 6 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯುವುದು. ಅಧ್ಯಕ್ಷತೆಯನ್ನು ಡಾ. ಎಂ.ಜಿ. ಈಶ್ವರಪ್ಪ ವಹಿಸುವರು. ಕಾರ್ಯಕ್ರಮವನ್ನು ಪಿ.ಎನ್. ಲೋಕೇಶ್‌ ಉದ್ಘಾಟಿಸುವರು. ಪರಮೇಶ್ವರ ರಾವ್‌ ಎಂ.ಕೆ., ಪ್ರಾಸ್ತಾವಿಕ ನುಡಿಗಳನ್ನಾಡುವರು.

ಮುಖ್ಯ ಅತಿಥಿಗಳಾಗಿ ಡಾ. ರವಿಕುಮಾರ್‌ ಟಿ.ಜಿ., ದಿನೇಶ್‌ ಕೆ. ಶೆಟ್ಟಿ, ಬಿ.ಎನ್‌. ಮಲ್ಲೇಶ್‌, ನಾಗೇಂದ್ರ ಬಂಡೀಕರ್‌ ಆಗಮಿಸುವರು. ಕಾರ್ಯಕ್ರಮದಲ್ಲಿ ಕು. ರವಿರಾಜ್‌ ಜಿ. ಹುಲಗೂರು ಇವರನ್ನು ಸನ್ಮಾನಿಸಲಾಗುವುದು.

ನಂತರ ಸಂಜೆ 7 ಗಂಟೆಗೆ ನೊಬೆಲ್‌ ಪ್ರಶಸ್ತಿ ವಿಜೇತ `ದಾರಿಯೋ ಷೋ’ನ ದಿ ವರ್ಚುವಲ್‌ ಬರ್ಗ್ಲರ್‌ `ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನಗೊಳ್ಳುವುದು.

ನಾಳೆ ಬುಧವಾರ ಬೆಳಿಗ್ಗೆ `ವೀರ ಯೋಧರರೊಂದಿಗೆ’ ವಿಚಾರ ಸಂಕಿರಣದಲ್ಲಿ ಎಸ್‌.ಟಿ. ವೀರೇಶ್‌, ಬಾ.ಮ. ಬಸವರಾಜಯ್ಯ ಅವರೊಂದಿಗೆ ಸಂವಾದ ನಡೆಯುವುದು. ಸಂವಾದದಲ್ಲಿ ಕೆ.ಎಂ. ಸುರೇಶ್‌, ಸಂಪನ್‌ ಮುತಾಲಿಕ್‌, ಮಂಜಾನಾಯ್ಕ ಕೆ.ಆರ್‌. ಶ್ರೀಮತಿ ಶುಭ ಐನಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬೆಳಿಗ್ಗೆ 10 ಕ್ಕೆ `ಹುತಾತ್ಮರು’ ವಿಷಯ ಕುರಿತು ಸಂವಾದ ನಡೆಯುವುದು.  ಅಂದು ಮಧ್ಯಾಹ್ನ ನಡೆಯುವ `ವೀರ ಯೋಧರೊಂದಿಗೆ’ ಸಂವಾದದಲ್ಲಿ ವಾಸುದೇವ್‌ ರಾಯ್ಕರ್‌, ಕೊಂಡಜ್ಜಿ ಜಯಪ್ರಕಾಶ್‌ ಅವರೊಂದಿಗೆ ವಿಚಾರ ಸಂಕಿರಣ ನಡೆಯುವುದು. ಸಂವಾದದಲ್ಲಿ ವಿನಯ್‌ಕುಮಾರ್‌ ಜಿ.ಬಿ., ಪ್ರಕಾಶ್‌ ಪಿ.ಬಿ., ಮಾರ್ಕಂಡಯ್ಯ, ಎನ್‌.ಆರ್. ಪ್ರಸನ್ನ ಕುಮಾರ್‌ ಕೆ. ಉಮೇಶ್ವರ್‌ ಶರಣಾರ್ಥಿ ಭಾಗವಹಿಸುವರು. 

ಮಧ್ಯಾಹ್ನ 12 ಗಂಟೆಗೆ `ಹುತಾತ್ಮರು’ ವಿಷಯ ಕುರಿತು ಸಂವಾದ ನಡೆಯುವುದು. 

ಸಂಜೆ 6 ಗಂಟೆಗೆ ನಡೆಯುವ `ವೀರ ಯೋಧರ ರೊಂದಿಗೆ’ ಸಂವಾದದಲ್ಲಿ ಎನ್.ಟಿ. ಮಂಜುನಾಥ್‌ ಅವರೊಂದಿಗೆ ಸಂವಾದ ನಡೆಯುವುದು. ಸತ್ಯಪ್ರಕಾಶ್‌ ಎಂ.ಎನ್‌., ಡಾ. ಹೆಚ್‌. ವಿಶ್ವನಾಥ್‌, ಟಾರ್ಗೆಟ್‌ ಮಹಮ್ಮದ್‌ ಅಸ್ಲಂ, ರವಿಚಂದ್ರ, ಎಂ.ಟಿ. ಸುಭಾಷ್‌ಚಂದ್ರ, ಶಿವಕುಮಾರ್‌ ಟಿ. ಭಾಗವಹಿಸುವರು. 

7 ಗಂಟೆಗೆ ಹುತಾತ್ಮರು ಕುರಿತು ಏಕ ವ್ಯಕ್ತಿ ಪ್ರಹಸನ ನಡೆಯುವುದು.

error: Content is protected !!