ಮಲೇಬೆನ್ನೂರು, ನ.6- ಮಾಗಾನಹಳ್ಳಿ ಹಾಲಪ್ಪನವರು ಬಹಳ ಕಷ್ಟದಿಂದ ಬೆಳೆದು ಮೇಲೆ ಬಂದಿದ್ದು, ಅವರು ಅರ್ಥಪೂರ್ಣ ಬದುಕು ಸಾಗಿಸುವ ಮೂಲಕ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಕುಂಬಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹರಿಹರ ತಾ.ಪಂ. ಹಾಗೂ ಜಿಲ್ಲಾ ಗಂಗಾಮತಸ್ಥ ಸಮಾಜದ ಮಾಜಿ ಅಧ್ಯಕ್ಷರಾದ ಮಾಗಾನ ಹಳ್ಳಿ ಹಾಲಪ್ಪನವರ ಕೈಲಾಸ ಸಮಾರಾಧನೆ ಹಾಗೂ ನುಡಿ ನಮನ ಕಾರ್ಯತಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಾಲಪ್ಪನವರ ಅವಿಭಕ್ತ ಕುಟುಂಬ ಮುಂದೆಯೂ ಹೀಗೆಯೇ ಇರಲಿ ಎಂದು ಸ್ವಾಮೀಜಿ ಶುಭ ಹಾರೈಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಹಮಾಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಹಾಲಪ್ಪಜ್ಜನವರು, ಹಂತ ಹಂತವಾಗಿ ಬೆಳೆದು ಹರಿಹರ ತಾ.ಪಂ. ಅಧ್ಯಕ್ಷರಾಗಿ, ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷರಾಗಿ, ಗ್ರಾ.ಪಂ. ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಕುಟುಂಬವನ್ನು ಬಲಿಷ್ಠವಾಗಿ ಬೆಳೆಸುವ ಮೂಲಕ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಹಾಲಪ್ಪಜ್ಜನವರು, ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬೇರೆ ಪಕ್ಷದವರ ಜೊತೆಯೂ ಪ್ರೀತಿ-ವಿಶ್ವಾಸದಿಂದ ಇರುತ್ತಿದ್ದರು. ಅವರು ಶತಾಯುಷಿಗಳಾಗಬೇಕಿತ್ತೆಂಬುದು ನಮ್ಮ ಆಶಯವಾಗಿತ್ತು ಎಂದರು.
ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಹಾಲಪ್ಪಜ್ಜನವರು ನನ್ನನ್ನು ಶಾಸಕನನ್ನಾಗಿ ಮಾಡಲು ಬಹಳ ಹೋರಾಟ ಮಾಡಿದ್ದರು. ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಅವರಂತೆ ಅವರ ಮಕ್ಕಳು ರಾಜಕೀಯವಾಗಿ ಬೆಳೆಯಲಿ ಎಂದರು.
ಜಿಲ್ಲಾ ಗಂಗಾಮತಸ್ಥ ಸಮಾಜ ಅಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಮಂಜುನಾಥ್ ಮಾತನಾಡಿ, ಹಾಲಪ್ಪನವರು ನಮ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿದ್ದಾಗ ಸಂಘಕ್ಕೆ ಸ್ವಂತ ಕಟ್ಟಡ ಕಟ್ಟಲು ಚಾಲನೆ ನೀಡಿದ್ದರು. ಅದನ್ನು ನಾವು ಪೂರ್ಣಗೊಳಿಸಿದ್ದೇವೆ. ಹಾಲಪ್ಪಜ್ಜ ಮಾಗಾನಹಳ್ಳಿಯಿಂದ ಕುಂಬಳೂರಿಗೆ ಬಂದು, ಕಠಿಣ ಪರಿಶ್ರಮದ ಮೂಲಕ ದೊಡ್ಡ ಸಾಮ್ರಾಜ್ಯ ಕಟ್ಟಿ ಹೋಗಿದ್ದಾರೆ. ಆ ಸಾಮ್ರಾಜ್ಯ ಅವರ ಮಕ್ಕಳು ಬೆಳಸಬೇಕೆಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರ ಪುತ್ರ ಶಿವಕುಮಾರ್ ಒಡೆಯರ್, ಕೆಪಿಸಿಸಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ್ ಸುಣಗಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವೀರಯ್ಯ, ಉಪನ್ಯಾಸಕ ರಾಜೇಶ್ ನೋಟದ್, ಗ್ರಾಮದ ಆರ್.ಹೆಚ್.ಬಸವರಾಜ್, ಬಿ.ಶಂಭುಲಿಂಗಪ್ಪ ಅವರುಗಳು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಕೊಳೇನಹಳ್ಳಿ ಸತೀಶ್, ತಾ.ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಕಾಂಗ್ರೆಸ್ ಮುಖಂಡ ಸುರೇಶ್ ಹಾದಿಮನಿ, ತಾ.ಪಂ. ಮಾಜಿ ಅಧ್ಯಕ್ಷರಾದ ಎಸ್.ಜಿ.ಪರಮೇಶ್ವರಪ್ಪ, ಆದಾಪುರ ವೀರಭದ್ರಪ್ಪ, ಭಾನುವಳ್ಳಿ ಕನ್ನಪ್ಪ, ಉದ್ಯಮಿ ವೈ.ವಿರೂಪಾಕ್ಷಪ್ಪ, ಜಿ.ಪಂ. ಮಾಜಿ ಸದಸ್ಯೆ ಗಂಗಮ್ಮ ಮಹಾಂತೇಶ್, ಮಾಜಿ ಪ್ರಧಾನ ನಿಟ್ಟೂರು ಏಕಾಂತಪ್ಪ, ಹುಲ್ಮನಿ ನಿಂಗಪ್ಪ, ಕಣ್ಣಾಳ್ ಧರ್ಮಣ್ಣ, ಕೆಂಚನಹಳ್ಳಿ ಮಹಾಂತೇಶ್, ಗುಳದಹಳ್ಳಿ ನಾಗರಾಜ್, ಹಿರಿಯ ವಕೀಲ ಬಿ.ಗಂಗಪ್ಪ, ದಾವಣಗೆರೆ ಗೋಪಾಲಪ್ಪ, ಮಾಗಾನಹಳ್ಳಿ ಪರಮಶುರಾಮ್, ಅಯೂಬ್ ಪೈಲ್ವಾನ್, ರಾಜಭವನ್ ಗಾಂಧಿ, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ತಳಸದ ಬಸವರಾಜ್, ಮಲೇಬೆನ್ನೂರಿನ ಗೌಡ್ರ ಮಂಜಣ್ಣ, ಕಣ್ಣಾಳ್ ಪರಸಪ್ಪ, ಕಣ್ಣಾಳ್ ಹನುಮಂತಪ್ಪ, ಧರ್ಮಣ್ಣ, ಕೆ.ಪಿ.ಗಂಗಾಧರ್, ಎ.ಆರೀಫ್ ಅಲಿ, ಬಂಗಾರದ ಅಂಗಡಿ ರಾಜು, ಕೊಮಾರನಹಳ್ಳಿ ಉಜ್ಜೇಶ್, ಬಿ.ಉಮಾಶಂಕರ್, ಮಲ್ಲನಾಯಕನಹಳ್ಳಿ ಮಾಲತೇಶ್, ಅವಲಕ್ಕಿ ಮಿಲ್ ರಾಜು, ವಾಸನದ ಭೋಜರಾಜ್, ಪಿ.ಆರ್.ರಾಜು, ಭೋವಿಕುಮಾರ್, ಪಿ.ಹೆಚ್.ಶಿವು, ಪಿ.ಆರ್.ಕುಮಾರ್, ಎ.ಕೆ.ಲೋಕೇಶ್, ಜಿಗಳಿ ಇಂದೂಧರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಕೆ.ಕುಬೇರಪ್ಪ ಪ್ರಾರ್ಥಿಸಿದರು. ಎಂ.ವಾಸುದೇವಮೂರ್ತಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ, ಎಂ.ಹೆಚ್.ಶರಣ್ ವಂದಿಸಿದರು.