ದಾವಣಗೆರೆ, ನ. 5 – ತೋಳಹುಣಸೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆ ಶಿವಗಂಗೋತ್ರಿಯಲ್ಲಿ ಜರುಗಿದ ಸಿಬಿಎಸ್‍ಇ ದಕ್ಷಿಣ ವಲಯ ಈಜು ಕ್ರೀಡಾಕೂಟ-2023ದಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ 260 ಅಂಕ ಪಡೆದು, ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿತು.
ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಉತ್ತರ ಶಾಲಾ ತಂಡ 193 ಅಂಕ ಗಳಿಸಿ ದ್ವಿತೀಯ ಸ್ಥಾನ ಮತ್ತು ಕೇರಳದ ವಿಶ್ವಜ್ಯೋತಿ ಪಬ್ಲಿಕ್ ಅಂಗಮಲಿ ಎರ್ನಾಕುಲಮ್ ಶಾಲೆ 187 ಅಂಕದೊಂದಿಗೆ ತೃತೀಯ ಸ್ಥಾನ ಪಡೆಯಿತು.
ಶಾಲೆಯ ಸುಸಜ್ಜಿತ ಈಜುಗೊಳದಲ್ಲಿ ಕಳೆದ ವಾರ ಜರುಗಿದ ಈ ಕ್ರೀಡಾಕೂಟದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ದೀವು-ಡಮನ್, ನಗರ-ಹವೇಲಿ ಕೇಂದ್ರಾಡಳಿತ ಪ್ರದೇಶಗಳ 11, 14, 17 ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರು ಸುಮಾರು 2,500 ಈಜು ಸ್ಪರ್ಧೆಗಳು ಭಾಗವಹಿಸಿದ್ದರು.
ಸುಸಜ್ಜಿತ ಈಜುಗೊಳದಲ್ಲಿ ಈಜು ಕ್ರೀಡಾಪಟುಗಳು ಮೀನುಗಳೂ ಸಹ ನಾಚುವ ಹಾಗೆ ಈಜಿ ಪ್ರೇಕ್ಷಕರನ್ನು ಮುದಗೊಳಿಸಿ, ಕಣ್ಮನ ತಣಿಸಿದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಸ್ಥರಾದ ಮಂಜು ನಾಥ ರಂಗರಾಜು ಮಾತನಾಡಿ, ಈಜು ಕ್ರೀಡಾಪಟುಗಳ ಸಾಧನೆಯನ್ನು ಶ್ಲ್ಯಾಘಿಸಿ, ನಿರಂತರ ಪ್ರಯತ್ನದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿ ಎಂದು ಹಾರೈಸಿದರು.
ಕ್ರೀಡಾಕೂಟಕ್ಕೆ ಎಲ್ಲಾ ರೀತಿಯಿಂದಲೂ ಸಹಕರಿಸಿದ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯನ್ನು ಮತ್ತು ಕ್ರೀಡಾಕೂಟದ ವೀಕ್ಷಕರಾದ ಸಿದ್ದು ಕೆರೆಸೂರು ಹಾಗೂ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಸಂಜೀವ್ ಕುಮಾರ್ ಅವರನ್ನು ಮತ್ತು ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರ ಸಹಕಾರವನ್ನು ಸ್ಮರಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಕಮಲ್ ಬಿ. ಎನ್., ಶ್ರೀಮತಿ ಜೆ. ಎಸ್. ವನಿತಾ ಅವರು ವಿಜೇತ ಕ್ರೀಡಾಪ ಟುಗಳಿಗೆ ಪ್ರಶಸ್ತಿ ವಿತರಿಸಿದರು. ಸಮಾರಂಭದಲ್ಲಿ ಅರುಣ್ ಪ್ರಸಾದ್, ರಾಜೇಶ್ ಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ಗುರುನಾಥ ಪ್ರಾರ್ಥಿಸಿ ದರು. ನೃತ್ಯ ಶಿಕ್ಷಕಿಯರಾದ ಭಾರ್ಗವಿ, ಸೌಂದರ್ಯ ಮತ್ತು ಕು. ಅಸ್ವಿಕಾ ಭರತನಾಟ್ಯ ಮತ್ತು ವಿದ್ಯಾರ್ಥಿ ಆರ್ಯ ಸಿದ್ದೇಶ್ ಮತ್ತು ತಂಡದವರು ನೃತ್ಯ ಪ್ರದರ್ಶನ ನೀಡಿದರು.