ಹರಪನಹಳ್ಳಿ, ನ. 5 – ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದ ಶ್ರೀ ಬಳ್ಳಾರಿ ದುರುಗಮ್ಮ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಕಾಣಿಕೆ ಹುಂಡಿ ಹಣ ತೆಗೆದಿರಲಿಲ್ಲ. ಈ ಬಾರಿ ಹುಂಡಿ ಒಡೆದು ಅದರ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಈ ಕಳ್ಳತನ ನಡೆದಿರುವುದು ನಮಗೆ ಬೇಸರ ತಂದಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರು ತಿಳಿಸಿದ್ದಾರೆ.