ಮಲೇಬೆನ್ನೂರು, ನ. 5 – ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀ ರಾಜವೀರ ವೀರ ಮದಕರಿ ನಾಯಕ ಸೇವಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಶೋಭಾಯಾತ್ರೆ ಜರುಗಿತು.
ಇಲ್ಲಿನ ನೀರಾವರಿ ಇಲಾಖೆಯ ಆವರಣದಿಂದ ಪ್ರಾರಂಭಗೊಂಡ ಮೆರವಣಿಗೆಗೆ ಹೊನ್ನಾಳಿ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ಹುಲ್ಮನಿ ಟ್ರ್ಯಾಕ್ಟರ್‌ಗೆ ಚಾಲನೆ ನೀಡುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.
ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ರೋಷನ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಹರಿಹರ ತಾ. ಗ್ರಾಮಾಂತರ ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹರಿಹರ ನಗರ ಅಧ್ಯಕ್ಷ ಮೆಣಸಿನಹಾಳ್ ಬಸವರಾಜ್, ಮಲೇಬೆನ್ನೂರು ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ. ವಾಸಣ್ಣ, ರಾಜನಹಳ್ಳಿ ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ಹರಿಹರ ನಗರಸಭೆ ಸದಸ್ಯ ದಿನೇಶ್‌ಬಾಬು, ಮಲೇಬೆನ್ನೂರು ಪುರಸಭೆ ಸದಸ್ಯರಾದ ಟಿ. ಹನುಮಂತಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಕೆ.ಜಿ. ಲೋಕೇಶ್, ಭೋವಿ ಶಿವು, ಕೆ.ಪಿ. ಗಂಗಾಧರ್, ಬಿ. ಸುರೇಶ್, ಪಿ.ಆರ್. ರಾಜು, ಭೋವಿ ಕುಮಾರ್, ಮಾಜಿ ಸದಸ್ಯರಾದ ಎ. ಆರೀಫ್ ಅಲಿ, ಎ.ಕೆ. ಲೋಕೇಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಸೇರಿದಂತೆ ಇನ್ನೂ ಅನೇಕರು ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಪಟ್ಟಣದ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಗಜೇಂದ್ರಪ್ಪ, ಹುಲುಗಿನಹೊಳೆ ನಾಗರಾಜ್, ವೇರ್‌ಹೌಸ್ ಬಸವರಾಜ್, ಕಜ್ಜರಿ ಹರೀಶ್, ಬಸವರಾಜ್ ದೊಡ್ಮನಿ, ಪ್ರವೀಣ್, ಹೋಟೆಲ್ ಅಣ್ಣಪ್ಪ, ಬಸವರಾಜ್ ವಾಲ್ಮೀಕಿ, ರಘು, ಅಪೂರ್ವ, ಸುರೇಶ್ ಹಾಲಿವಾಣ ಸೇರಿದಂತೆ, ಇನ್ನೂ ಅನೇಕ ಯುವಕರು ಮೆರವಣಿಗೆಯ ಯಶಸ್ಸಿಗೆ ಶ್ರಮಿಸಿದರು.
ಸಂಗೊಳ್ಳಿ ರಾಯಣ್ಣ ಸೇನೆಯ ಪೂಜಾರ್ ಮಹೇಶ್ ಇಡೀ ದಿನ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಪಿಎಸ್‌ಐಗಳಾದ ಅರವಿಂದ್, ಶ್ರೀಪತಿ ಗಿನ್ನಿ ಮತ್ತು ಎಎಸ್‌ಐ ಎನ್.ಹೆಚ್. ಬಸವರಾಜ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.