ಮಲೇಬೆನ್ನೂರು, ನ. 5 – ಕುಂಬಳೂರು ಗ್ರಾಮದಲ್ಲಿ ಭಾನುವಾರ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಮರಿಬನ್ನಿ ಹಾಗೂ ದೊಡ್ಡ ಎಡೆ ಜಾತ್ರೆಯು ಶ್ರೀ ಹನುಮಂತ ದೇವರು, ಶ್ರೀ ಬಸವೇಶ್ವರ ದೇವರ ಸಾನ್ನಿಧ್ಯದಲ್ಲಿ ಜರುಗಿತು.
ಬೆಳಿಗ್ಗೆ ವಿವಿಧ ಪೂಜೆ ಹಾಗೂ ಸೇವೆಗಳ ನಂತರ ಬೀರಪ್ಪನಿಗೆ ದೊಡ್ಡ ಎಡೆ ಪೂಜೆಯನ್ನು ಪೂಜಾರಪ್ಪರ ತಂಡವು ನೆರವೇರಿಸಿತು. ಗ್ರಾಮದ ಮಠದ ಶ್ರೀ ಕೊಟ್ರಯ್ಯನವರ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.