ರಾಣೇಬೆನ್ನೂರು, ನ. 5 – ನಗರದ ಚೋಳ ಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಚನ್ನಬಸಪ್ಪ ಎಸ್, ಶಾಲಾ ಸದಸ್ಯರಾದ ಲತಾ ಸಿ. ಎಸ್, ಸಹಶಿಕ್ಷಕಿಯರಾದ ಪುಷ್ಪಾ ಉಜ್ಜೇರ, ಚೈತಾ ಸಿ. ಪಿ, ಆಶಾ ಬಿ. ಎ, ನಾಗೇಂದ್ರ ಎಂ, ಪ್ರವೀಣಗೌಡ ಪಾಟೀಲ, ದೀಪಾ ಆರ್. ಕೆ, ಗೀತಾ ಕಮ್ಮಾರ, ಐಶ್ವರ್ಯ ಎಂ.ಎಸ್, ದುರ್ಗಮ್ಮ ಬೆನ್ನೂರ, ನವೀನ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಕನ್ನಡಾಭಿಮಾನ ಬಿಂಬಿಸುವ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಪಾಲಕರಾದ ಶಿವರುದ್ರಪ್ಪ ಅಂಗಡಿ, ವಿಶ್ವನಾಥ ಕಮ್ಮಾರ, ಬಸವರಾಜ ರಟ್ಟೀಹಳ್ಳಿ, ಮಹಮ್ಮದ ರಫೀಕ್ ರಟ್ಟಿಹಳ್ಳಿ ಹಾಜರಿದ್ದರು.
January 10, 2025