ವಿನೂತನ ಮಹಿಳಾ ಸಮಾಜದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ವಿನೂತನ ಮಹಿಳಾ ಸಮಾಜದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ದಾವಣಗೆರೆ, ನ. 3- ನಗರದ ವಿನೂತನ ಮಹಿಳಾ ಸಮಾ ಜದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡತನ, ಕನ್ನಡ ಭಾಷೆ ಉಳಿಸುವಲ್ಲಿ ಕನ್ನಡಿಗರ ಪಾತ್ರ ಎಂಬ ವಿಷಯದ ಬಗ್ಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ಕರ್ನಾ ಟಕ ದರ್ಶನ ಎನ್ನುವ ಪರಿಕಲ್ಪನೆಯೊಂದಿಗೆ ಆಂಗ್ಲ ಪದ ಬಳಕೆ ಮಾಡದೇ ಆಶುಭಾಷಣ ಸ್ಪರ್ಧೆ, ದಿನನಿತ್ಯ ಬಳಸುವ ಆಂಗ್ಲ ಪದ ಗಳನ್ನು ಕನ್ನಡದಲ್ಲಿ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ಉಷಾ ಬಸವರಾಜ್ ಆಗಮಿಸಿದ್ದರು. ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಮಂಜುನಾಥ್ ಉಪಸ್ಥಿತರಿದ್ದರು.

ಸಿಜಿಕೆ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸತ್ಯಭಾಮ ಮಂಜುನಾಥ ಹಾಗೂ ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ವಿಜಯ ಸಿ. ಅಕ್ಕಿ ಅವರನ್ನು ಗೌರವಿಸಲಾಯಿತು. ಭುವನೇಶ್ವರಿ ಸ್ವಾಗತಿಸಿದರು. ಸುಧಾ ಅತಿಥಿಗಳನ್ನು ಪರಿಚಿಸಿದರು. ಇಂದಿರಾ ಆಶು ಭಾಷಣ ಸ್ಪರ್ಧೆ ನಡೆಸಿಕೊಟ್ಟರು. ಲತಾ ಫಲಿತಾಂಶದ ವಿವರ ಹೇಳಿದರು. ಸುಕನ್ಯಾ ವಂದಿಸಿದರು. ರತ್ನ ಗೌರವ ಸಮರ್ಪಣೆ ಮಾಡಿದರು. ಹೇಮಾ ಕಾರ್ಯಕ್ರಮ ನಿರೂಪಿಸಿದರು. 

error: Content is protected !!