ಗಿಡ ಬೆಳೆಸುವುದರಿಂದ ವೈಯಕ್ತಿಕ ಲಾಭಕ್ಕಿಂತ ಪರಿಸರಕ್ಕೆ ಹೆಚ್ಚಿನ ಅನುಕೂಲ

ಗಿಡ ಬೆಳೆಸುವುದರಿಂದ ವೈಯಕ್ತಿಕ ಲಾಭಕ್ಕಿಂತ ಪರಿಸರಕ್ಕೆ ಹೆಚ್ಚಿನ ಅನುಕೂಲ

ಮಲೇಬೆನ್ನೂರು, ನ. 3- ಜಿಗಳಿ ಗ್ರಾಮದ ನಾಗಸನಹಳ್ಳಿ ಬಸವರಾಜ್ ಅವರ ತೋಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ರೈತರಿಗೆ ಗೋಡಂಬಿ ಗಿಡಗಳನ್ನು ವಿತರಣೆ ಮಾಡಲಾಯಿತು.

ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್ ಮಾತನಾಡಿ, ಗೋಡಂಬಿ ವಾಣಿಜ್ಯ ಬೆಳೆಯಾಗಿದ್ದು, ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ರೈತರು ಈ ಗಿಡಗಳನ್ನು ನೀರಿಲ್ಲದೆ ಒಣಗಿಸದೆ, ತೋಟ ಅಥವಾ ಮನೆಯ ಬಳಿ ಇರುವ ಜಾಗದಲ್ಲಿ ನೆಟ್ಟು ತಮ್ಮ ಮಗುವಿನಂತೆ ಬೆಳೆಸಬೇಕೆಂದರು. ಒಟ್ಟು 6800 ಗಿಡಗಳನ್ನು ಜಿಗಳಿ ಮತ್ತು ಕೆ.ಎನ್. ಹಳ್ಳಿ  ವಲಯದ ರೈತರಿಗೆ ವಿತರಣೆ ಮಾಡಲಾಗು ವುದೆಂದರು.

ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಅವರು ರೈತರ ಬಗ್ಗೆ ಬಹಳ ವಿಶೇಷ ಕಾಳಜಿ ಹೊಂದಿದ್ದು, ರೈತರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಯೋಜನೆಯಿಂದ ನೀಡುತ್ತಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿ, ಒಂದು ಗಿಡ ಬೆಳೆಸುವುದರಿಂದ ವೈಯಕ್ತಿಕ ಲಾಭಕ್ಕಿಂತ ಪರಿಸರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಅದರಿಂದ ನಮಗೆ ಗಾಳಿ, ನೆರಳು ಸೇರಿದಂತೆ  ಇತ್ಯಾದಿ ಅನುಕೂಲವಾಗಲಿದೆ ಎಂದರು.

ಗ್ರಾಮದ ಮುಖಂಡ ಬನ್ನಿಕೋಡು ನಾಗರಾಜಪ್ಪ, `ಎ’ಒಕ್ಕೂಟದ ಅಧ್ಯಕ್ಷ ರುದ್ರಗೌಡ, ಉಪಾಧ್ಯಕ್ಷ ನಾಗಸನಹಳ್ಳಿ ಬಸವರಾಜ್, `ಬಿ’ ಒಕ್ಕೂಟದ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷ ವಿಜಯ ಭಾಸ್ಕರ್, ಪದಾಧಿಕಾರಿ ಹೇಮಾವತಿ, ಸಂಪನ್ಮೂಲ ವ್ಯಕ್ತಿ ಹೆಚ್.ಎಂ. ಸದಾನಂದ್, ಸೇವಾ ಪ್ರತಿನಿಧಿಗಳಾದ ನಾಗರತ್ನ, ಮಮತಾ ಸೇರಿದಂತೆ, ರೈತರು ಈ ವೇಳೆ ಹಾಜರಿದ್ದರು.

error: Content is protected !!