ಹರಪನಹಳ್ಳಿಯಲ್ಲಿ ವಿಕಾಸ ಬ್ಯಾಂಕ್ 10ನೇ ಶಾಖೆ ಉದ್ಘಾಟನೆ

ಹರಪನಹಳ್ಳಿಯಲ್ಲಿ ವಿಕಾಸ ಬ್ಯಾಂಕ್ 10ನೇ ಶಾಖೆ ಉದ್ಘಾಟನೆ

ಹರಪನಹಳ್ಳಿ, ನ.3- ಸಹಕಾರ ಕ್ಷೇತ್ರದ ಸಂವರ್ಧನೆ ಕಾರ್ಯಕ್ಕೆ ವಿಕಾಸ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಕೊಟ್ಟೂರು ರಸ್ತೆಯ ಬಳಿ ನೂತನ ವಿಕಾಸ ಬ್ಯಾಂಕಿನ 10ನೇ  ಶಾಖೆಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಆರ್ಥಿಕವಾಗಿ ಬೆಳೆಯಬೇಕಾದರೆ ಬ್ಯಾಂಕ್‍ಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಸೌಲಭ್ಯ ವನ್ನು ಪಡೆದು ವ್ಯವಹಾರಿಕವಾಗಿ ವ್ಯವಹರಿಸಿ ಸಾಲವನ್ನು ಮರುಪಾವತಿ ಮಾಡಿದಾಗ ಬ್ಯಾಂಕ್ ಸಹ ಉನ್ನತಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು. 

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ, ಆಧುನಿಕ ಯುಗದಲ್ಲಿ ಸ್ಪರ್ಧೆಗಳು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಈ ಬ್ಯಾಂಕ್ ಸಹ ವರ್ಷದ 365 ದಿನಗಳ ಕಾಲ ಸೇವೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು. 

ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಹಿರೇಮಠ್ ಮಾತನಾಡಿ, ಬ್ಯಾಂಕಿನ ಪ್ರಗತಿಯನ್ನು ಮಾರ್ಮಿಕವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ್, ನಿರ್ದೇಶಕರುಗಳಾದ ಶ್ರೀಮತಿ ಛಾಯಾ ದಿವಾಕರ್, ರಮೇಶ್ ಪುರೋಹಿತ್, ಕೆ.ವಿಕಾಸ, ಎಂ.ವೆಂಕಪ್ಪ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಎಂ.ರಾಜಶೇಖರ್, ಅಂಬ್ಲಿ ಮಂಜುನಾಥ, ದಿವಾಕರ್, ವೆಂಕಪ್ಪ, ಅನಂತ ಜೋಷಿ, ಪ್ರಸನ್ನ ಹಿರೇಮಠ್, ಗುಡ್ಡನಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.   

error: Content is protected !!