ಬಸವಾಪಟ್ಟಣ ಉಪವಿಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ

ಬಸವಾಪಟ್ಟಣ ಉಪವಿಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ

150 ಅಕ್ರಮ ಪಂಪ್‌ಸೆಟ್‌ಗಳು ವಶಕ್ಕೆ : ಸ್ಥಳಕ್ಕೆ ಭದ್ರಾ ಎಇಇ ಭೇಟಿ

ಮಲೇಬೆನ್ನೂರು, ನ.2- ಜಿಲ್ಲಾಧಿ ಕಾರಿ ಡಾ. ಎಂ.ವಿ.ವೆಂಕಟೇಶ್ ಅವರ ನಿರ್ದೇಶನದ ಮೇರೆಗೆ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪಿ ಸುವ ಉದ್ದೇಶದಿಂದ ಭದ್ರಾ ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿ ಕೊಂಡಿದ್ದ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಗುರುವಾರದಿಂದ ಆರಂಭಗೊಂಡಿದೆ.

ಮಲೇಬೆನ್ನೂರು ಭದ್ರಾ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ವ್ಯಾಪ್ತಿಯಲ್ಲಿ ಬರುವ ಬಸವಾಪಟ್ಟಣ ಉಪವಿಭಾಗದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು 150 ಅಕ್ರಮ ಪಂಪ್‌ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಸವಾಪಟ್ಟಣದಿಂದ ಹರಲೀಪುರ ದವರೆಗೆ ಇವತ್ತು ಕಾರ್ಯಾಚರಣೆ ನಡೆದಿದ್ದು, ಶುಕ್ರವಾರ ಹರಲೀಪುರದಿಂದ ಮಲೇಕುಂಬಳೂರು, ಕುಂದೂರು, ಯಕ್ಕನಹಳ್ಳಿ ಮಾರ್ಗವಾಗಿ ಕೊಪ್ಪದವ ರೆಗೂ ಮಾಡಲಾ ಗುವುದೆಂದು ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಎಇಇ ಧನಂಜಯ `ಜನತಾವಾಣಿ’ಗೆ ತಿಳಿಸಿದರು.

ಅಕ್ರಮ ಪಂಪ್‌ಸೆಟ್‌ಗಳಿಗೆ ಪೂರೈಕೆ ಆಗುತ್ತಿದ್ದ ವಿದ್ಯುತ್ ಸಂಪರ್ಕವನ್ನೂ ಕಡಿತ ಗೊಳಿಸಿದ್ದರಿಂದ ಗುರುವಾರ ಸಂಜೆ ಕೊಮಾ ರನಹಳ್ಳಿ ಬಳಿ ನಾಲೆಯಲ್ಲಿ 4.5 ಅಡಿಗೆ ನೀರಿನ ಹರಿವು ಹೆಚ್ಚಾಗಿತ್ತು.

ಬೆಸ್ಕಾಂ ಮತ್ತು ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಕಡೆ ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ರೈತರು ಅಡ್ಡಿ ಪಡಿಸಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶ ಮಾಡಿದಾಗ ರೈತರು ಸುಮ್ಮನಾಗಿದ್ದಾರೆಂದು ಹೇಳಲಾಗಿದೆ.

ಎಸ್ಇ ಭೇಟಿ : ಭದ್ರಾ ಯೋಜನೆಯ ಅಧೀಕ್ಷಕ ಇಂಜಿನಿಯರ್ ಸುಜಾತ ಅವರು ಗುರುವಾರ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಸ್ಥಳಕ್ಕೆ
ಭೇಟಿ ನೀಡಿದ್ದರು. ನಂತರ ಅಲ್ಲಿಂದ ನಾಲೆಯ ಮಾರ್ಗದ ಮೂಲಕ ಕೊಮಾರನಹಳ್ಳಿವರೆಗೆ ಬಂದು ನೀರಿನ ಮಟ್ಟವನ್ನು ಪರಿಶೀಲಿಸಿದ್ದಾರೆ.

error: Content is protected !!