ಹೊನ್ನಾಳಿ, ಅ.2- ಶಿವ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ರಾಮೇಶ್ವರ ಪಿ.ಚಂದ್ರಪ್ಪ ಪಾಟೀಲ್, ಉಪಾಧ್ಯಕ್ಷರಾಗಿ ಸೂರಗೊಂಡನಕೊಪ್ಪ ಬಿ.ಕೆಂಚಪ್ಪ ಇಂದು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಿಡಿಒ ಹಾಗೂ ಚುನಾವಣಾಕಾರಿ ನವೀನ್ ಕುಮಾರ್ ತಿಳಿಸಿದರು. ನಿರ್ದೇಶಕರಾದ ಶೈಲೇಶ್, ಮಂಜುಳಮ್ಮ, ಶಿವಕುಮಾರ್, ಶಂಕರೇಗೌಡ, ಬಸವರಾಜು, ಚೇತನ್, ಕರಿಬಸಪ್ಪ, ಸತೀಶ್, ಚನ್ನವೀರಪ್ಪ, ಯಶೋಧಮ್ಮ, ಕೃಷ್ಣನಾಯ್ಕ್, ಕಾರ್ಯದರ್ಶಿ ರುದ್ರೇಶ್,ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಗದ್ದಿಗೇಶ್, ಅರಬಗಟ್ಟೆ ರಮೇಶ್ ಹಾಗೂ ಇತರರು ಇದ್ದರು.
ಹೊನ್ನಾಳಿ : ಶಿವ ಸೊಸೈಟಿ ಅಧ್ಯಕ್ಷರಾಗಿ ಚಂದ್ರಪ್ಪ ಉಪಾಧ್ಯಕ್ಷರಾಗಿ ಕೆಂಚಪ್ಪ ಆಯ್ಕೆ
