ರಾಣೇಬೆನ್ನೂರು : ದಾಖಲೆಗಳನ್ನು ಪರಿಶೀಲಿಸಿದ ಕೃಷ್ಣಭೈರೇಗೌಡ

ರಾಣೇಬೆನ್ನೂರು : ದಾಖಲೆಗಳನ್ನು ಪರಿಶೀಲಿಸಿದ ಕೃಷ್ಣಭೈರೇಗೌಡ

ರಾಣೇಬೆನ್ನೂರು, ನ.2- ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಗುರುವಾರ ನಗರದ ತಹಶೀಲ್ದಾರ್‌ ಕಛೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಇಲ್ಲಿನ ತಹಶೀಲ್ದಾರ್‌ ಕಛೇರಿ ಯಲ್ಲಿ ಸುಮಾರು ನೂರಾರು ವರ್ಷಗಳ‌ ಕಾಗ ದಗಳ ದಾಖಲೆಗಳೂ ಇವೆ. ಅವುಗಳು ಈಗಾ ಗಲೇ ಶಿಥಿಲಾವಸ್ಥೆಯಲ್ಲಿವೆ. ಆದ್ದರಿಂದ ಅವುಗ ಳನ್ನು ಉಳಿಸಿಕೊಳ್ಳುವ ಬಗ್ಗೆ ತಹಶೀಲ್ದಾರ್‌ರ ಜೊತೆಗೆ ಮಾತನಾಡಿದ್ದೇನೆ ಎಂದರು.

ಕಂದಾಯ ಇಲಾಖೆಯಿಂದ ಸಾರ್ವಜನಿಕ ರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗ ದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು. ಈಗಾಗಲೇ ಶಿಥಿಲಾವ್ಯವಸ್ಥೆ ಯಲ್ಲಿರುವ ದಾಖಲೆಗಳು ಕಳೆದುಹೋದರೆ ಜನರಿಗೆ ಬಹಳ ಸಮಸ್ಯೆಯಾಗುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ಡಿಜಿಟಲ್‌ ರೂಪದಲ್ಲಿ ಮುಂದಿನ ಪೀಳಿಗೆಗೂ ಉಳಿಸುವಂತಹ ಕಾರ್ಯ ಮಾಡಬೇಕು. ಸಾರ್ವಜನಿಕರಿಗೆ ಸುಲಭವಾಗಿ ದಾಖಲೆಗಳು ಲಭ್ಯವಾಗುವಂತೆ ಮಾಡುವುದು, ರೆಕಾರ್ಡ್ ರೂಮ್‌ಗಳಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಅವುಗಳನ್ನು ಉಳಿಸುವಂತಹ ಕೆಲಸ ಮಾಡಬೇಕು. ಅದಕ್ಕಾಗಿ ಸರ್ವೇ ನಂ. ಹಾಗೂ ರೆಕಾರ್ಡ್ ರೂಂ ಗಳನ್ನು ವೀಕ್ಷಣೆ ಮಾಡಿದ್ದೇನೆ. ಒಟ್ಟಾರೆ ಕಂದಾಯ ಇಲಾಖೆ ಜನಗಳಿಗೆ ಅನುಕೂಲವಾಗುವ ಹಾಗೆ ಪ್ರಾಮಾಣಿಕ ಕೆಲಸ ಮಾಡಬೇಕು. ಜನರಿಗೆ ನಮ್ಮಿಂದ ತೊಂದರೆಯಾಗಬಾರದು‌. ಜನರ ಜೀವನಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಅದು ನಮ್ಮ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

error: Content is protected !!