ಜಗಳೂರು, ನ. 2- ಜಗಳೂರು ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿರುವ ಕೆ. ರೇವಣಸಿದ್ದಪ್ಪ ಇವರಿಗೆ ಈಚೆಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಮತ್ತು ದಾವಣಗೆರೆ ಅಗ್ನಿಶಾಮಕ ಠಾಣಾಧಿಕಾರಿ ಅವಿನಾಶ್ ಮತ್ತು ಜಗಳೂರು ಅಗ್ನಿಶಾಮಕ ಠಾಣಾಧಿಕಾರಿ ಆರ್. ಹನುಮಂತರಾಯ ಅಭಿನಂದಿಸಿದ್ದಾರೆ.
ಕೆ. ರೇವಣಸಿದ್ದಪ್ಪ ಅವರಿಗೆ ಬೀಳ್ಕೊಡುಗೆ
