ಎಲೆಬೇತೂರಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ಎಲೆಬೇತೂರಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ, ನ. 2- ಶ್ರೀ ಕೊಂಡಜ್ಜಿ ಬಸಪ್ಪ ಕನ್ನಡ ಮಾಧ್ಯಮ ಪ್ರೌಢಶಾಲೆ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಮತ್ತು ಪೌಢಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರುಣಾ ಜೀವ ಟ್ರಸ್ಟ್‍ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಎಲೆಬೇತೂರಿನ ಷಡಕ್ಷರಪ್ಪ, ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ  ಹೆಚ್. ಬಸವರಾಜಪ್ಪ ಮತ್ತು ಕನ್ನಡ ಅಧ್ಯಾಪಕ ಎಸ್.ಆರ್. ನಾಗರಾಜ್ ಕನ್ನಡದ ಇತಿಹಾಸ, ಹಿರಿಮೆ-ಗರಿಮೆಗಳ ಕುರಿತು ಮಾತನಾಡಿದರು. 

ಎ.ಕೆ. ಫೌಂಡೇಷನ್‍ನ ಮುಖ್ಯಸ್ಥ ಬಿ. ಕೊಟ್ರೇಶ್ ಶಾಲೆಗೆ ಅಂದಾಜು 25 ಸಾವಿರ ಮೌಲ್ಯದ ಧ್ವನಿವರ್ಧಕ ನೀಡಿ ಮಾತನಾಡಿದರು. ಸ್ಥಳೀಯ ಸಲಹ ಸಮಿತಿಯ ಅಧ್ಯಕ್ಷ ಎಂ. ಬಸವರಾಜಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯ ಮೇಲೆ ಉಭಯ ಶಾಲೆಗಳ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಕೊಟ್ರೇಶ್, ರಾಜಣ್ಣ, ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್, ಎಸ್.ಓ. ಷಣ್ಮುಖಪ್ಪ, ಅನಿತಾ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ನೂತನ್ ಕೆ, ಮೇಘನಾ ಬಿ, ಲಕ್ಷ್ಮೀ ಆರ್, ಪೂಜಾ ಟಿ.ಆರ್, ಸುಪ್ರಭೆ ಡಿ ಎಸ್ ಕನ್ನಡ ಭಾಷೆ ಕುರಿತು ಮಾತನಾಡಿದರು. 

ಸಿಂಚನಾ ಮತ್ತು ಸಂಗಡಿಗರು ಕನ್ನಡ ಹಾಡುಗಳನ್ನು ಹಾಡಿದರು. ಮುಖ್ಯೋಪಾ ಧ್ಯಾಯರಾದ ಎಂ.ಬಿ. ಪ್ರೇಮಾ ಸ್ವಾಗತಿಸಿದರು. ಬಿ.ಎಂ. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಿ.ಆರ್. ಸುನಿತ ವಂದಿಸಿದರು.

error: Content is protected !!