ಕಡಲೆ ಬೆಳೆ ನವೀನ ತಳಿ ಯಾಂತ್ರಿಕ ಕಟಾವಿಗೆ ಸೂಕ್ತ

ಕಡಲೆ ಬೆಳೆ ನವೀನ ತಳಿ ಯಾಂತ್ರಿಕ ಕಟಾವಿಗೆ ಸೂಕ್ತ

ಭೀಮನೇರಿ ಗ್ರಾಮದ ರೈತರ ಸಭೆಯಲ್ಲಿ ಬೇಸಾಯ ತಜ್ಞ  ಬಿ.ಓ ಮಲ್ಲಿಕಾರ್ಜುನ್ ಸಲಹೆ

ದಾವಣಗೆರೆ, ನ.2- ಹಿಂಗಾರಿ ಬೆಳೆಯಾಗಿ ಕಡಲೆಯಲ್ಲಿ ನವೀನ ತಳಿಗಳಾದ   ಜಿಬಿಎಂ-2 ಮತ್ತು ಎನ್‌ಬಿಇಜಿ-47  ಯಾಂತ್ರೀಕೃತ ಕಟಾವಿಗಾಗಿ ಸೂಕ್ತ ತಳಿಗಳಾಗಿವೆ ಎಂದು ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್   ಅಭಿಪ್ರ್ರಾಯಪಟ್ಟರು. ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ದಾವಣಗೆರೆ) ಇವರು ಯಾಂತ್ರೀಕೃತ ಕಟಾವು ಹಾಗೂ ಹೆಚ್ಚಿನ ಇಳುವರಿ ಕೊಡುವ ಕಡಲೆ ಬೆಳೆಯಲ್ಲಿ ವಿವಿಧ ಸೂಕ್ತ ತಳಿಗಳ ತುಲನೆಯ ಕ್ಷೇತ್ರ ಪ್ರಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಚನ್ನಗಿರಿ ತಾಲ್ಲೂಕಿನ ಭೀಮನೇರಿ ಗ್ರಾಮದ ಆಯ್ದ ರೈತರು ಭಾಗವಹಿಸಿದ್ದರು.

 ಕಡಲೆ ಬೆಳೆಯಲ್ಲಿ ಯಾಂತ್ರೀಕೃತ ಕಟಾವಿಗೆ ಸೂಕ್ತವಾದ ತಳಿಗಳಾದ   ಜಿಬಿಎಂ-2 ಮತ್ತು ಎನ್‌ಬಿಇಜಿ-47  ನೀರಾವರಿಗೆ ಸೂಕ್ತ ಹಾಗೂ ಜೈವಿಕ ಗೊಬ್ಬರಗಳಾದ ರೈಜೋಬಿಯಂ ಮತ್ತು ಪಿ.ಎಸ್.ಬಿ. ತಲಾ 200 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬೀಜೋ ಪಚಾರ ಮಾಡಿ ಬಿತ್ತನೆ ಮಾಡುವುದರಿಂದ ರಾಸಾಯನಿಕ ಗೊಬ್ಬ ರದ ಬಳಕೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡಬಹುದು ಎಂದು ಅಭಿಪ್ರಾ ಯಪಟ್ಟರು.  ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಒಳ ಸುರಿವುಗಳನ್ನು ನೀಡಲಾಯಿತು.

error: Content is protected !!