ತಂದೆ ಕೊಟ್ಟ ಸಂಸ್ಕಾರ ಶಾಸಕನನ್ನಾಗಿಸಿದೆ : ಶಾಸಕ ಪ್ರಕಾಶ ಕೋಳಿವಾಡ

ತಂದೆ ಕೊಟ್ಟ ಸಂಸ್ಕಾರ ಶಾಸಕನನ್ನಾಗಿಸಿದೆ : ಶಾಸಕ ಪ್ರಕಾಶ ಕೋಳಿವಾಡ

ಕೆ.ಬಿ. ಕೋಳಿವಾಡ ಅವರ 80ನೇ ಹುಟ್ಟುಹಬ್ಬದ ಸಮಾರಂಭ

ರಾಣೇಬೆನ್ನೂರು, ನ.1- ನಾವು ಸಣ್ಣವರಿದ್ದಾಗಲೇ ಬಡವರ, ದೀನ-ದಲಿತರ, ತುಳಿತಕ್ಕೊಳಗಾದವರ, ಕಷ್ಟ-,ಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿದವರು ನನ್ನ ತಂದೆ ಕೆ.ಬಿ.ಕೋಳಿವಾಡರು. ಹಾಗಾಗಿ ಪಿಕೆಕೆ ಇನಿಷಿಯೇಟಿವ್ ಹುಟ್ಟಿಕೊಂಡಿತು. ನಮ್ಮ ತಂದೆ ನಮಗೆ ಕೊಟ್ಟ ಸಂಸ್ಕಾರ ನನ್ನನ್ನು  ಶಾಸಕ ಸ್ಥಾನದಲ್ಲಿ ಕೂರಿಸಿತು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಅವರು ಇಂದು ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕೆ.ಬಿ. ಕೋಳಿವಾಡ ಅವರ 80 ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಪಿಕೆಕೆ ಇದುವರೆಗೂ ಅನೇಕ ಉದ್ಯೋಗ ಮೇಳಗಳ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ಕೊಡಿಸಿದೆ, ಬಡಜನರ ಆರೋಗ್ಯ ರಕ್ಷಣೆಯಲ್ಲಿ ಆಂಬ್ಯು ಲೆನ್ಸ್ ಸೇವೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ, ಕೌಶಲ್ಯ ತರಬೇತಿ ಜೊತೆಗೆ ರೈತರಿಗೆ ಕೃಷಿ ಪರಿಕರಗಳ ಮೂಲಕ ಸ್ಪಂದನೆ. ಇವೆಲ್ಲ ನನ್ನ ಕೈಹಿಡಿಯುವಲ್ಲಿ ಸಹಕಾರ ನೀಡಿದವು ಎಂದು ಪ್ರಕಾಶ್ ವಿವರಿಸಿದರು.

ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ನಮ್ಮ ತಂದೆಯವರಿಗೆ ದೊರಕುವ ಡಯಾಲಿಸಿಸ್ ಚಿಕಿತ್ಸೆ ನನ್ನ ತಾಲ್ಲೂಕಿನ ಜನತೆಗೂ ದೊರಕಿಸಲು ಮೊಬೈಲ್ ಯಂತ್ರ, ಹೃದಯ ಬೇನೆಗೆ ತಕ್ಷಣ ಚಿಕಿತ್ಸೆ ನೀಡಿ ಅರ್ಧದಷ್ಟು ಸಾವಿನ ಪ್ರಮಾಣ ಕಡಿಮೆ ಮಾಡಲು ತಾಲ್ಲೂಕಿನ 5 ನೂರು ಜನಕ್ಕೆ ತರಬೇತಿ  ನೀಡುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಧ್ವನಿ ಆಪ್, ಈ ಮೂರೂ ನಮ್ಮ ತಂದೆಯ 80ನೇ ಜನ್ಮ ದಿನದ ಕೊಡುಗೆಗಳು ಎಂದು ಪ್ರಕಾಶ್ ಹೇಳಿದರು.

ಮೈಸೂರು ಜಿಲ್ಲೆ ಗುಂಡ್ಲುಪೇಟೆಯ ಕೆ.ಎಸ್. ನಾಗರತ್ನಮ್ಮ ಸಭಾಪತಿಗಳು, ಹುಣಸೂರಿನವರು ಮುಖ್ಯಮಂತ್ರಿ ದೇವರಾಜ ಅರಸು ಅವರು ಇದ್ದ ಸಂದರ್ಭ ದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣವಾಯಿತು. ಈ ಮಸೂದೆಗೆ ಅಂದಿನ ಶಾಸಕರಾದ ಕೆ.ಬಿ.ಕೋಳಿವಾಡ ಹಾಗೂ ಐ.ಜಿ.ಸನದಿ. ಕರ್ನಾಟಕಕ್ಕೆ 50 ವರ್ಷ, ಕೋಳಿವಾಡರಿಗೆ 80 ವರ್ಷ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆಪಿಸಿಸಿ ಸದಸ್ಯ ಬಿ.ಎಸ್. ಮರದ ಹೇಳಿದರು.

ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವ ಶಿವಾನಂದ ಪಾಟೀಲ್, ಶಾಸಕರಾದ ಸಲೀಮ್ ಆಹ್ಮದ್, ಬಸವರಾಜ ಶಿವಣ್ಣನವರ, ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಅಜ್ಜಂಪೀರ್‌ಖಾಂದ್ರಿ, ಬಿ.ಎಚ್.ಬನ್ನಿಕೋಡ ಶುಭ ಕೋರಿದರು. ಬಿಜೆಪಿಯ ಭಾರತಿ ಜಂಬಗಿ,  ರವಿ ಪಾಟೀಲ್, ಪ್ರಕಾಶ್ ಜೈನ್, ಕೆಸಿಸಿ ಬ್ಯಾಂಕ್ ಇನ್ನಿತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸ್ವಾಗತಿಸಿದರು.

error: Content is protected !!