ಮಲೇಬೆನ್ನೂರು : ವಿವಿಧೆಡೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು : ವಿವಿಧೆಡೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು : ವಿವಿಧೆಡೆಯಲ್ಲಿ ಸಂಭ್ರಮದ ರಾಜ್ಯೋತ್ಸವ - Janathavani

ಮಲೇಬೆನ್ನೂರು, ನ.1- ಪಟ್ಟಣದ ಪುರಸಭೆ, ನಾಡಕಚೇರಿ, ಪೊಲೀಸ್ ಠಾಣೆ, ನೀರಾವರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಲಯನ್ಸ್ ಕ್ಲಬ್ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪುರಸಭೆ ಹಾಗೂ ಮುಖ್ಯ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ರಾಷ್ಟ್ರ ಧ್ವಜಾರೋಹಣ ಮಾಡಿ, ವಂದನೆ ಸ್ವೀಕರಿಸಿದರು. ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಕೆ.ಜಿ.ಲೋಕೇಶ್, ನಯಾಜ್, ಷಾ ಅಬ್ರಾರ್, ದಾದಾಪೀರ್, ಸಾಬೀರ್ ಅಲಿ, ಭೋವಿ ಶಿವು, ಬಿ.ಮಂಜುನಾಥ್, ಕೆ.ಪಿ.ಗಂಗಾಧರ್, ಬಿ.ಸುರೇಶ್, ಯುಸೂಫ್, ಭೋವಿ ಕುಮಾರ್, ಚಮನ್ ಷಾ ಸೇರಿದಂತೆ ಇತರರು ಭಾಗವಹಿಸಿದ್ದರು.

ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಆರ್.ರವಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ದರು. ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಕೊಟ್ರೇಶ್, ಶ್ರೀಧರ್, ಬೋರಯ್ಯ, ಆನಂದತೀರ್ಥ, ಸೌಮ್ಯ ಹಾಗೂ  ಇತರರು ಹಾಜರಿದ್ದರು.

ಜಿಗಳಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರವೇ ಹೋಬಳಿ ಘಟಕದ ಅಧ್ಯಕ್ಷ ಎಳೆಹೊಳೆ ಕುಮಾರ್ ಅವರು ಕನ್ನಡ ಧ್ವಜಾರೋಹಣ ಮಾಡಿದರು.

ಗಾಂಧಿ, ಬಟ್ಟೆ ಅಂಗಡಿ ವಿಶ್ವ, ಗಂಗಾಧರ್, ಆರ್ಟ್ಸ್ ಮಂಜು ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ದೈಹಿಕ ಶಿಕ್ಷಕ ಹಾಲಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.

ಶ್ರೀಮತಿ ಬಸಮ್ಮ ಕೆಂಚಪ್ಪ, ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ವಿಜಯ ರಾಘವ್, ಕಾರ್ಯದರ್ಶಿ ಹೆಚ್.ಜಿ.ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಜ್ಯೋತ್ಸವದಲ್ಲಿ ಮಾಜಿ ಗೌವರ್ನರ್ ಡಾ. ಟಿ.ಬಸವರಾಜ್ ಮಾತನಾಡಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಶಾಲಾ ಮುಖ್ಯ ಶಿಕ್ಷಕ ಹಾಗೂ ಕಸಾಪ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶ್ರೀ ಬೀರಲಿಂಗೇಶ್ವರ ವಿದ್ಯಾಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಜರಾಜೇಶ್ವರಿ ಶಾಲೆ, ಮಾಲತೇಶ ಶಾಲೆ, ಮಾರುತಿ ಶಾಲೆ ಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

error: Content is protected !!