ಮಲೇಬೆನ್ನೂರು, ಅ.30- ಸೋಮವಾರ ಸಂಜೆ ಮಲೇಬೆನ್ನೂರು, ಕೊಮಾರನಹಳ್ಳಿ, ಜಿಗಳಿ, ಜಿ.ಬೇವಿನಹಳ್ಳಿ, ಕುಂಬಳೂರು, ನಂದಿತಾವರೆ, ವಿನಾಯಕ ನಗರ ಕ್ಯಾಂಪ್, ನಿಟ್ಟೂರು, ಆದಾಪುರ, ಬೂದಿಹಾಳ್, ಕುಣೆಬೆಳಕೆರೆ ಮತ್ತಿತರೆ ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆ ಕಾಲ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.
ಮಲೇಬೆನ್ನೂರು ಪಟ್ಟಣದ ಹೆದ್ದಾರಿ ಅಕ್ಕಪಕ್ಕದ ಚರಂಡಿ ತುಂಬಿ, ರಸ್ತೆಯಲ್ಲಿ ನೀರು ಹರಿಯಿತು. ಜಿ.ಬೇವಿನಹಳ್ಳಿ ಬಳಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ.