ಕನ್ನಡ ನಾಮಫಲಕ ಹಾಕಲು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮನವಿ

ಕನ್ನಡ ನಾಮಫಲಕ ಹಾಕಲು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮನವಿ

ದಾವಣಗೆರೆ, ಅ. 30 – ನಗರದ ವಾಣಿಜ್ಯ ಮಳಿಗೆಗಳ ಮಾಲೀಕರು ನಾಳೆ ದಿನಾಂಕ 31 ರೊಳಗೆ ತಮ್ಮ ಅಂಗಡಿಯ ಆಂಗ್ಲ ಭಾಷೆಗಳ ನಾಮಫಲಕವನ್ನು ತೆರವುಗೊಳಿಸಿ, ಕನ್ನಡ ಭಾಷೆಯಲ್ಲಿರುವ ನಾಮಫಲಕ ವನ್ನು ಕಡ್ಡಾಯವಾಗಿ ಹಾಕಬೇಕೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಿ ಅಂಗಡಿಗಳ ಮುಂಭಾಗದಲ್ಲಿ ಸಂಘಟನೆ ಸಿದ್ಧಪಡಿಸಿದ ಕರಪತ್ರವನ್ನು ಹಚ್ಚುವ ಮೂಲಕ ತಿಳಿಸಲಾಯಿತು.

ನಾಳೆ ದಿನಾಂಕ 31ರೊಳಗೆ ಆಂಗ್ಲ ನಾಮಫಲಕವನ್ನು ತೆಗೆಯದಿದ್ದರೆ ನವೆಂಬರ್ 1 ರ ಬೆಳಿಗ್ಗೆ 11 ಕ್ಕೆ ಆಗ್ಲ ಭಾಷಾ ನಾಮಫಲಕವಿರುವ ಯಾವುದೇ ಅಂಗಡಿ, ಮುಂಗಟ್ಟುಗಳು ಆಗಿದ್ದರೂ ಸಹ ಕಪ್ಪು ಮಸಿ ಬಳಿಯಲಾಗುವುದು ಎಂದು ವೇದಿಕೆ ಪದಾಧಿಕಾರಿಗಳು ಎಚ್ಚರಿಸಿದರು.

ಮಹಾನಗರ ಪಾಲಿಕೆ ಆಯುಕ್ತರು ಹಾಗು ಅಧಿಕಾರಿಗಳು ಕಪ್ಪು ಮಸಿ ಬಳಿಯುವುದಕ್ಕೆ ಅವಕಾಶ ಕೊಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಕೇಳಿಕೊಂಡರು. 

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರು ಅವಿನಾಶ್ ವಿ. ಮಾಲಾ ನಾಗರಾಜ್‌, ರಾಘವೇಂದ್ರ ಡಿ.ಜೆ, ರಮೇಶ ಚಿ. ನಾಯಕ, ಭೋಜರಾಜ್, ನಟರಾಜ್, ಈರಣ್ಣ ಎನ್.ಎಸ್. ಲಕ್ಷ್ಮಿ, ಸದ್ದಾಂ, ಫಯಾಜ್, ಗುರುರಾಜ್, ಮಂಜುನಾಥ್‌, ರಮೇಶ್ ಬೆಳವನೂ‌, ಪ್ರಥಾಪ್, ಹನುಮಂತ್, ಚಂದ್ರು, ಎಸ್.ಮಂಜುನಾಥ್, ರಘು, ಗುಡ್ಡಪ್ಪ, ರೋಹಿತ್ ಇನ್ನಿತರರು ಭಾಗವಹಿಸಿದ್ದರು.

error: Content is protected !!