ವಾಲ್ಮೀಕಿಯವರ ತತ್ವ-ಸಿದ್ಧಾಂತಗಳಿಂದ ಉನ್ನತ ಸ್ಥಾನ

ವಾಲ್ಮೀಕಿಯವರ ತತ್ವ-ಸಿದ್ಧಾಂತಗಳಿಂದ ಉನ್ನತ ಸ್ಥಾನ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ

ಹರಿಹರ, ಅ, 30-  ರಾಮಾಯಣದಂತಹ ಪವಿತ್ರ ಗ್ರಂಥ ರಚಿಸಿರುವ ಮಹರ್ಷಿ ವಾಲ್ಮೀಕಿ ಯವರ ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. 

ನಗರದ ಗುತ್ತೂರು ಹತ್ತಿರದ ವಾಲ್ಮೀಕಿ ಸಮುದಾಯ ಭವನದಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. 

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಜಗತ್ತಿನಲ್ಲೇ ಶ್ರೇಷ್ಠ ಕೃತಿಯಾಗಿದ್ದು, ಜೀವನ ಮೌಲ್ಯಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ. ವಾಲ್ಮೀಕಿ ಯವರು ವಿಶ್ವದಾದ್ಯಂತ ತಮ್ಮ ಹೆಸರನ್ನು ಪಸರಿಸುವ ಮೂಲಕ ನಾಯಕ ಸಮಾಜಕ್ಕೆ ಒಂದು ಹಿರಿಮೆಯನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು. ಗುತ್ತೂರು ಗ್ರಾಮದಲ್ಲಿ ನಿವೇಶನ ರಸ್ತೆಯ ಪಕ್ಕದಲ್ಲಿ ಇದ್ದು, ಸುಸಜ್ಜಿತ ಮತ್ತು ಬೃಹತ್ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಾಣ ಮಾಡು ವುದಕ್ಕೆ ನೀಲ ನಕ್ಷೆ ತಯಾರಿಸಲು ಇಂಜಿನಿಯರ್ ಗೆ ತಿಳಿಸಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು. 

ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಕಾಳೇರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಗ್ರಂಥವನ್ನು ರಚಿಸಿ, ತಳ ಸಮುದಾಯನ್ನು ಮೇಲೆ ತರವಂತಹ ಕೆಲಸ ಮಾಡದಿದ್ದರೆ ಸಮಾನ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯುವುದು ಕಷ್ಟವಾಗುತ್ತಿತ್ತು. ಹಾಗಾಗಿ ಇಂದಿನ ಯುವಕರು ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು, ದುರಾಸೆ ಮತ್ತು ದುಷ್ಕೃತ್ಯ ತೊರೆದು ಮಾನವೀಯತೆಯ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.

ನಗರಸಭೆ ಸದಸ್ಯ ದಿನೇಶ್ ಬಾಬು, ಧರ್ಮದರ್ಶಿ ಕೆ.ಬಿ. ಮಂಜುನಾಥ್, ಗೌರವಾಧ್ಯಕ್ಷ ಆಟೋ ರಾಜು, ದೇವೇಂದ್ರಪ್ಪ, ಪಾಲಾಕ್ಷಪ್ಪ, ಕೃಷ್ಣಪ್ಪ, ಮೆಣಸಿನಾಳ ಗಂಗಾ ಧರ, ರವಿಕುಮಾರ್, ಭರತ್, ಬಸವರಾಜಪ್ಪ, ಆಂಜಿನಪ್ಪ, ರಾಮಪ್ಪ, ರಾವುಗಪ್ಪ, ಹನುಮಂತಪ್ಪ ಇತರರು ಹಾಜರಿದ್ದರು.

error: Content is protected !!