ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್ ಶ್ಲ್ಯಾಘನೆ
ಹರಪನಹಳ್ಳಿ, ಅ.29- ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸರು, ಪುರಂದರದಾಸರು, ಅಂಬೇಡ್ಕರ್ ಸೇರಿದಂತೆ ಇತರ ಮಹನೀಯರ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ರಾಮನ ಚರಿತ್ರೆ ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಹಾರಕನಾಳು ಗ್ರಾಮದ ವಾಲ್ಮೀಕಿ ಸಮುದಾಯದ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಹಬ್ಬ-ಹರಿದಿನ ಸೇರಿದಂತೆ ವಿವಿಧ ಆಚರಣೆಗಳನ್ನು ಬಳುವಳಿ ಯಾಗಿ ನೀಡಬೇಕಿದೆ. ಮಹಾನಾಯಕರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದರು.
ಹಾರಕನಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಗ್ಯ ಕೆ. ಅಶೋಕ್ ಮಾತನಾಡಿ, `ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ಸಂದೇಶ ಸಾರಿದ ಮಹನೀಯರು ಮಹರ್ಷಿ ವಾಲ್ಮೀಕಿ. ಎಲ್ಲಾ ಸಮಾಜದವರು ಸೇರಿ ಜಯಂತಿ ಆಚರಿಸಬೇಕಿದೆ. ಮನುಕುಲಕ್ಕೆ ಅಮೂಲ್ಯ ಗ್ರಂಥವಾದ ರಾಮಾಯಣ ನೀಡಿದ್ದಾರೆ. ಅವರ ಸಂದೇಶದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.
ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಹುಚ್ಚೆಂಗಪ್ಪ ಮಾತನಾಡಿ, ತಾಲ್ಲೂಕಿನ ಕಟ್ಟಕಡೆಯ ಹಳ್ಳಿಗಳಲ್ಲಿ ಇಂತಹ ನಾಯಕರ ಜಯಂತಿ ಆಚರಿಸುವುದರಿಂದ ಜನರಿಗೆ ಅರಿವಿನ ಜಾಗೃತಿ ಮತ್ತು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಸಹಕಾರಿಯಾಗುತ್ತದೆ. ಜೊತೆಗೆ ಇಂದಿನ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸುವ ಪ್ರಯತ್ನ ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಹೇಳಿದರು.
ಬಸವರಾಜಯ್ಯ ಮಾತನಾಡಿ, ವಾಲ್ಮೀಕಿ ಮಹಾನ್ ನಾಯಕನ ಸಾಧನೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ.ಇಂತಹ ನಾಯಕರ ಜಯಂತಿ ಕೇವಲ ಸಮುದಾಯಕ್ಕೆ ಸಮೀತವಾಗದಿರಲಿ ಎಲ್ಲಾ ಸಮುದಾಯದವರು ಅವರ ಜಯಂತಿ ಆಚರಣೆ ಮಾಡುವಂತೆ ಆಗಬೇಕು ಎಂದರು.
ಸಮಾಜದ ಮುಖಂಡ ಮನೋಜ್ ತಳವಾರ ಮಾತನಾಡಿದರು. ಹಾರಿಕಾ ಮಂಜು ನಾಥ್, ವಾಲ್ಮೀಕಿ ಮತ್ತು ರಾಮಾಯಣ ಕುರಿತಾದ ಮಾಹಿತಿ ನೀಡಿದರು.ಕನ್ನಡ ಕೋಗಿಲೆ ಖ್ಯಾತಿ ಮಹಾನ್ಯ ಪಾಟೀಲ್ ಗಾಯಕಿಯಿಂದ ಸಂಗೀತ ಕಾರ್ಯಕ್ರಮ ನೀಡಿದರು. ಕೊಣ್ಣೂರು ಜಾನಪದ ಕಲಾಮೇಳದಿಂದ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಯಿತು.
ಸಮಾಜದ ಮುಖಂಡರಾದ ಸಣ್ಣ ಹಾಲಪ್ಪ, ಪಕ್ಕಿರಪ್ಪ ಕರವಸೂಲಿಗ ದುರಗದಯ್ಯ, ಬೆಲದ ಶಿವು, ಬಜ್ಜಿ ರಾಜಪ್ಪ, ಶಂಕರ್, ಡಿ.ಜಿ.ಪ್ರಕಾಶ್ ಗೌಡರು, ಶೃತಿ ಪಂಪಾನಾಯ್ಕ, ಚೂರಿ ಬಸವ ರಾಜ್ ಮೋತಿನಾಯ್ಕ, ಕೃಷ್ಣಾನಾಯ್ಕ, ಇಮಾಮ್ ಸಾಬ್, ಹಾಲೇಶ್ ನಾಯ್ಕ, ರಾಜಶೇಖರ್, ಓಮ್ಯಾಪ್ಪ, ಶಿವುನಾಯ್ಕ, ಕೆ.ದುರ್ಗಮ್ಮ, ಪ್ರಭು ಮಜ್ಜಿಗೆರೆ, ಮಾಂತೇಶ್, ಸ್ವಾಮಿನಾಯ್ಕ, ಹರೀಶ್ ನಾಯ್ಕ, ಬಸವರಾಜ್, ಜೋಗಪ್ಪನವರ ಪರಸಪ್ಪ, ಹಾಲೇಶಪ್ಪ, ಪೀಕಾನಾಯ್ಕ, ವೀರೇಶ್, ನಿಂಗನಗೌಡ, ದುರ್ಗಾನಾಯ್ಕ, ಪೂಜಾರ್ ಮಂಜಪ್ಪ, ಗೋಣಿ ಸ್ವಾಮಿ, ಚೋರಿ ಬಸಣ್ಣ, ಏಕಲವ್ಯ, ಮತ್ತೂರು ಬಸವರಾಜ್, ಶಿವಮೂರ್ತಿ, ಬಣಕಾರ್ ಶಂಕ್ರಪ್ಪ, ಮಜ್ಜಿಗೇರೆ ಬೀರಪ್ಪ, ಪೂಜಾರ್ ವೀರಣ್ಣ, ಗೋಣಿ ಸ್ವಾಮಿ, ಪೂಜಾರ್ ಬಸವರಾಜ್, ಕೂರ್ಕೋಟಿ ರೇವಣಪ್ಪ, ಹಾವ ನೂರು ಕರಿಯಪ್ಪ, ಇತರರು ಭಾಗಿಯಾಗಿದ್ದರು.