ಶಾಲೆಯಲ್ಲಿ ಮಕ್ಕಳಂತೆ ಆಟವಾಡಿದ ತಾಯಂದಿರು

ಶಾಲೆಯಲ್ಲಿ ಮಕ್ಕಳಂತೆ ಆಟವಾಡಿದ ತಾಯಂದಿರು

ಸೋಮೇಶ್ವರ ವಿದ್ಯಾಲಯದಲ್ಲಿ ಪೋಷಕರ ಕ್ರೀಡಾಕೂಟ

ದಾವಣಗೆರೆ, ಅ. 29 – ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಪೋಷಕರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು.  ಮ್ಯೂಸಿಕಲ್ ಚೇರ್, ಥ್ರೋ ಬಾಲ್, ಕೇರಂ ಸೇರಿದಂತೆ ಹಲವು ಕ್ರೀಡೆಗಳನ್ನು ಅಯೋಜಿಸಲಾಗಿತ್ತು. 

ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಪ್ರಭಾವತಿ, ಸದಾ ಮಕ್ಕಳ ಆರೈಕೆ, ಪೋಷಣೆಯಲ್ಲಿ  ಪೋಷಕರು ಇರುತ್ತಾರೆ, ಈ ಕಾರಣಕ್ಕಾಗಿ ಪೋಷಕರಿಗೂ ಸಹ ಸ್ವಲ್ಪ ರಿಲ್ಯಾಕ್ಸ್ ಆಗಲು ಇಂಥ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ. ಎಂ ಸುರೇಶ್ ಅವರು ನೀಡಿದ್ದ ಸಲಹೆಯಂತೆ ಈ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಹೇಳಿದರು. ಪೋಷಕರು ಶಾಲೆಯೊಂದಿಗೆ ಉತ್ತಮ ಒಡನಾಟ ಹೊಂದಲು ಇಂಥ ಕಾರ್ಯಕ್ರಮ ಅನುಕೂಲವಾಗುತ್ತದೆ ಎಂದರು. 

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಪೋಷಕ ರಂಜಿನಿ ರಮೇಶ್ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯ ಶಿಕ್ಷಕಿ ಗಾಯತ್ರಿ ಮಾಡಿದರು. ದೈಹಿಕ ಶಿಕ್ಷಕ ನಾಗರಾಜ್, ರಾಹುಲ್ ಹಾಗೂ ಇಂದ್ರಮ್ಮ ಕ್ರೀಡಾಕೂಟದ ಮಾರ್ಗದರ್ಶನ ಮಾಡಿದ್ದರು. 

ಈ ವೇಳೆ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಾಧ್ಯಾಯರಾದ ಮಾಲಾ, ಪ್ರಕಾಶ್, ಸೇರಿದಂತೆ  ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

error: Content is protected !!