ದಾವಣಗೆರೆ, ಅ. 29- ಶಾಲಾ ಶಿಕ್ಷಣ ಸಮಿತಿ ವತಿಯಿಂದ ನಡೆಸಲಾಗುವ 14 ಮತ್ತು 17 ವರ್ಷ ವಯೋಮಿತಿಯ ಬೆಂಗ ಳೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾ ವಳಿಯಲ್ಲಿ 14 ವರ್ಷ ವಯೋಮಿತಿ ದಾವ ಣಗೆರೆ ತಂಡಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಅಂತಿಮ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡವು 8 ಓವರ್‌ಗಳಲ್ಲಿ 63 ರನ್ ಗಳಿಸಿದ್ದು, ದಾವಣಗೆರೆ ತಂಡ 1 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿ ವಿಜಯಶಾಲಿ ಯಾಗಿದೆ. ದಾವಣಗೆರೆ ತಂಡದ ಸುಹಾನ 40 ರನ್, ಶಿವರಾಜ್ 15 ರನ್ ಹಾಗೂ ತೇಜಸ್ ನಾಯ್ಕ 7 ರನ್‌ಗಳನ್ನು ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಪಂದ್ಯದಲ್ಲಿ ಸುಹಾಸ್ ಕೊನೆಯ 6 ಎಸೆತಕ್ಕೆ 17 ರನ್ ಗಳಿಸುವುದರೊಂದಿಗೆ ತಂಡಕ್ಕೆ ವಿಜಯ ಮಾಲೆ ತಂದು ಕೊಟ್ಟಿದ್ದಾರೆ. ತರಬೇತುದಾರರಾಗಿ ಟಿ. ತಿಮ್ಮೇಶ್, ತಂಡದ ವ್ಯವಸ್ಥಾಪಕ ಹೆಚ್.ಎಂ. ವಸಂತಕುಮಾರ್, ಕೆ.ಎಸ್.ಜಗದೀಶ್ ಅವರನ್ನು ಡಿಡಿಪಿಐ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಅಭಿನಂದಿಸಿದ್ದಾರೆ.