ನಗರದಲ್ಲಿ ಖಾದಿ ಬಟ್ಟೆ ಜಾಗೃತಿ ಜಾಥಾ

ನಗರದಲ್ಲಿ ಖಾದಿ ಬಟ್ಟೆ ಜಾಗೃತಿ ಜಾಥಾ

ದಾವಣಗೆರೆ, ಅ.29- ಮಹಾತ್ಮ ಗಾಂಧೀಜಿ ಯವರ 154ನೇ ಜಯಂತಿ ಪ್ರಯುಕ್ತ ದೇಶಾದ್ಯಂತ ಅಕ್ಟೋಬರ್  2 ರಿಂದ  31 ರವರೆಗೆ ಖಾದಿ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂಬಂಧ ಜೈನ್ ಪದವಿ ಮಹಾವಿದ್ಯಾಲಯ ಹಾಗೂ ಜೈನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಖಾದಿ ಬಟ್ಟೆ   ಹಾಗೂ ಖಾದಿ ಉದ್ಯಮದ ಕುರಿತು ಉಪನ್ಯಾಸ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹರಿಹರ ಚರಕ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘ, ಚಿತ್ರದುರ್ಗ ಸರ್ವೋದಯ ಖಾದಿ ಗ್ರಾಮೋದ್ಯೋಗ ಸಂಘ, ದಾವಣಗೆರೆ ಚರಕ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಘ, ಅಕ್ಕ ನಾಗಮ್ಮ  ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಮಹಿಳಾ ಮಂಡಳಿ, ಶ್ರೀ ಭಾರತಾಂಬೆ ಮಹಿಳಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘ ಮತ್ತು ಶ್ರೀನಿಧಿ ಖಾದಿ ಮತ್ತು ಗುಡಿ ಕೈಗಾರಿಕೆಗಳ ಸಂಘ ಸುರಹೊನ್ನೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಿಎಂಸಿ ಅಂಡ್ ಟಿಎಂ ಮೆಮೋರಿಯಲ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಬಿ.ಎಸ್‌. ಶಿವರಾಜ್  ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ  ಬೋಧಿಸಿದರು. ವಿದ್ಯಾರ್ಥಿಗಳಿಗೆ ಖಾದಿ ಬಟ್ಟೆಯ ಬಳಕೆ ಜಾಗೃತಿ  ಮೂಡಿಸಲು ಜಾಥಾ ನಡೆಸಲಾಯಿತು.    ಜೈನ್ ಪಾಲಿಟೆಕ್ನಿಕ್‌ನ  ಮುಖ್ಯಸ್ಥ  ಚೇತನ್ ಎಸ್.ಜಿ ಹಾಗು ಇತರರು  ಉಪಸ್ಥಿತರಿದ್ದರು. 

error: Content is protected !!