ಹರಿಹರ, ಅ.27- ನಗರದ ಗುರುಭವನದಲ್ಲಿ ನಾಳೆ ದಿನಾಂಕ 28 ರ ಶನಿವಾರ ಬೆಳಗ್ಗೆ 10 ಗಂಟೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಲಾಗುತ್ತದೆ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮೊನ್ನೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ, ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್, ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್ ಮತ್ತು ಇತರರು ಆಗಮಿಸುವರು ಎಂದು ಹೇಳಿದರು.
ಸಭೆಯಲ್ಲಿ ಪೌರಾಯುಕ್ತ ಐಗೂರು ಬಸವರಾಜ್, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಕಾರ್ಮಿಕ ಇಲಾಖೆ ಕವಿತಾ, ಕೃಷಿ ಇಲಾಖೆ ನಾರನಗೌಡ, ಹಿಂದುಳಿದ ವರ್ಗಗಳ ಇಲಾಖೆ ಪರ್ವಿನ್ ಬಾನು , ತೋಟಗಾರಿಕೆ ಇಲಾಖೆ ಸಿದ್ದಪ್ಪ, ಶಿಕ್ಷಣ ಇಲಾಖೆ ಬಸವರಾಜಯ್ಯ, ನಗರಸಭೆ ಸದಸ್ಯ ದಿನೇಶ್ ಬಾಬು, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಂಗಪ್ಪ ಜಿಗಳಿ, ವಾಲ್ಮೀಕಿ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಕೆ.ಬಿ. ಮಂಜುನಾಥ್, ಅಧ್ಯಕ್ಷ ಎಂ. ಹೆಚ್ ಬಸವರಾಜ್, ಗೌರವಾಧ್ಯಕ್ಷ ಆರ್. ರಾಜು, ಕಾರ್ಯದರ್ಶಿ ಧನರಾಜ್, ಮುಖಂಡರಾದ ಹಂಚಿನ ನಾಗಪ್ಪ, ಪಾರ್ವತಿ, ದೇವೇಂದ್ರಪ್ಪ ಹಂಚಿನಮನೆ, ಗಂಗಾಧರ ಮೆಣಸಿನಾಳ, ಪರಶುರಾಮ್, ಅಂಜಿನಪ್ಪ ಗುಂಡಗತ್ತಿ, ಹೊನ್ನಪ್ಪ ಗಂಗನಹರಸಿ, ಮೋಹನ್ ಕುಮಾರ್, ಭರತ್ ಇತರರು ಹಾಜರಿದ್ದರು