ವರ-ಶಾಪ ಎರಡೂ ಆಗುತ್ತಿರುವ ವಯೋವೃದ್ಧರ ಆರೈಕೆ ಕೇಂದ್ರಗಳು

ವರ-ಶಾಪ ಎರಡೂ ಆಗುತ್ತಿರುವ ವಯೋವೃದ್ಧರ ಆರೈಕೆ ಕೇಂದ್ರಗಳು

ದಾವಣಗೆರೆ, ಅ.27- ಮಕ್ಕಳು ತಮ್ಮ ಜೀವನೋಪಾಯ ಅಥವಾ ಉನ್ನತ ವ್ಯಾಸಂಗಕ್ಕಾಗಿ ದೇಶ-ವಿದೇಶಗಳಿಗೆ ಹೋಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ವಯೋವೃದ್ಧರ ಆರೈಕೆ ಕೇಂದ್ರಗಳು ಹೆಚ್ಚಾಗುತ್ತಿವೆ ಎಂದು ಮಹಾರಾಜ ಸೋಪ್ಸ್ ಇಂಡಸ್ಟ್ರೀಸ್ ಮಾಲೀಕ ರವಿರಾಜ್ ವಿಷಾದಿಸಿದರು.

ನಗರದ ಎಂಸಿಸಿ ಬಿ ಬ್ಲಾಕ್ 4 ನೇ ಮೇನ್, 5 ನೇ ಕ್ರಾಸ್‌ನಲ್ಲಿ  ನೂತನವಾಗಿ ಆರಂಭಿಸಿರುವ ಮಹಾರಕ್ಷ ವಯೋವೃದ್ಧರ ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಯೋವೃದ್ಧರ ಆರೈಕೆ ಕೇಂದ್ರಗಳು ಒಂದೆಡೆ ಶಾಪವಾದರೆ ಇನ್ನೊಂದು ಕಡೆ ವರವಾಗುತ್ತಿವೆ. 

ಕಾರಣ ಮಕ್ಕಳು ಅನಿವಾರ್ಯವಾಗಿ ಉದ್ಯೋಗಕ್ಕಾಗಿ ಬೇರೆಡೆ ಹೋದಾಗ ಹಿರಿಯರನ್ನು ಚನ್ನಾಗಿ ಆರೈಕೆ ಮಾಡುವುದರೊಂದಿಗೆ ಅವರಲ್ಲಿ ಅನಾಥ ಪ್ರಜ್ಞೆ ಕಾಡಬಾರದು ಎಂಬ ಉದ್ದೇಶದಿಂದ ಇಂತಹ ಆರೈಕೆ ಕೇಂದ್ರಗಳು ಮಹತ್ವ ಪಡೆದಿವೆ ಎಂದರು.

ಮಕ್ಕಳನ್ನು ಬಿಟ್ಟು ವಯೋವೃದ್ಧರ ಆರೈಕೆ ಕೇಂದ್ರಗಳಿಗೆ ಬಂದಂತಹ ವಯೋವೃದ್ಧರಿಗೆ ಸರಿಯಾದ ಸಮಯಕ್ಕೆ ಊಟ, ವಸತಿ ಜೊತೆಗೆ ಆರೋಗ್ಯದ ರಕ್ಷಣೆ ಮಾಡುವುದರೊಂದಿಗೆ ಗೌರವದಿಂದ ನೋಡಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಚೇತನ
ಫಾರ್ಮಾ ಮಾಲೀಕರಾದ ಕೆ.ಇ. ಪ್ರಕಾಶ್,
ಪಾಲಿಕೆ ಸದಸ್ಯರಾದ ಮಂಜುನಾಥ ಗಡಿಗುಡಾಳ್, ಸೋಗಿ ಶಾಂತಕುಮಾರ್, ಮಹಾರಕ್ಷ ವಯೋವೃದ್ಧರ ಆರೈಕೆ ಕೇಂದ್ರದ ಮಾಲೀಕರಾದ ರೂಪ ಕೆ.ಎಂ. ಗುರು, ಶ್ರೀಮತಿ ನಾಗರತ್ನ ಪ್ರಕಾಶ್ ಸೇರಿದಂತೆ, ಅನೇಕರಿದ್ದರು.

error: Content is protected !!