ಮಲೇಬೆನ್ನೂರು, ಅ.27- ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿಬನ್ನಿ ಅಂಗವಾಗಿ ದೊಡ್ಡ ಎಡೆಜಾತ್ರೆ ನಾಡಿದ್ದು ದಿನಾಂಕ 29 ರಂದು ಜರುಗಲಿದೆ.
ಅಂದು ಬೆಳಿಗ್ಗೆ ವಿವಿಧ ಪೂಜೆಗಳ ನಂತರ ಸಾಮೂಹಿಕ ವಿವಾಹ ಹಾಗೂ ದೊಡ್ಡ ಎಡೆಪೂಜೆ ನಡೆಯಲಿದ್ದು, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಠದ ರೇವಣಸಿದ್ದಯ್ಯ ಸಾನ್ನಿಧ್ಯ ವಹಿಸುವರು. ನಂತರ ಅನ್ನ ಸಂತರ್ಪಣೆ ಇರುತ್ತದೆ.
ನಾಳೆ ದಿನಾಂಕ 28 ರ ಶನಿವಾರ ಸಂಜೆ ಕಾಳಿಕಾ ಹೋಮದ ನಂತರ ಒಡ್ಡೋಲಗ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಕಾರ್ಯದರ್ಶಿ ಕೆ.ಪಿ. ಗಂಗಾಧರ್ ತಿಳಿಸಿದ್ದಾರೆ.