ಶಿವಮೊಗ್ಗ, ಅ.24- ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಮಂಗಳವಾರ ರಾತ್ರಿ 10 ಗಂಟೆಯಿಂದ ನೀರು ಬೀಡಲಾಗಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಲಾಶಯವು ಈ ಬಾರಿ ಭರ್ತಿಯಾಗಿಲ್ಲ. ಆದ್ದರಿಂದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರನ್ನು ಉಳಿಸಬೇಕಾಗಿರುವುದರಿಂದ ಅಚ್ಚುಕಟ್ಟಿನ
ಮುಂಗಾರಿನ ಬೆಳೆಗೆ ಘೋಷಣೆ ಮಾಡಿದ್ದ 100 ದಿನಗಳಲ್ಲಿ ಆಫ್
ಅಂಡ್ ಆನ್ ಪದ್ಧತಿ ಜಾರಿ ಮಾಡಲಾಯಿತು. ಆ ಪ್ರಕಾರ ಈ ಹಿಂದೆ 10 ದಿನ ನಾಲೆಯಲ್ಲಿ ನೀರು ಬಂದ್ ಮಾಡಲಾಗಿತ್ತು. ಈಗ ಮತ್ತೆ 7 ದಿನ ನೀರು ಬಂದ್ ಮಾಡಿ, ಮಂಗಳವಾರ ರಾತ್ರಿಯಿಂದ ನೀರು ಹರಿಸಲಾಗುತ್ತಿದೆ.
ಮೂಲಗಳ ಪ್ರಕಾರ ನವೆಂಬರ್ 16 ರವರೆಗೆ ಬಲದಂಡೆ ನಾಲೆಯಲ್ಲಿ ನೀರು ಹರಿಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನ.16ಕ್ಕೆ ನೀರು ನಿಲುಗಡೆ ಮಾಡಿದರೆ, ಭತ್ತದ ಬೆಳೆಗೆ ತೊಂದರೆ ಆಗಲಿದೆ. ಹಾಗಾಗಿ ನ.30 ರವರೆಗೆ ನಾಲೆ ನೀರು ಹರಿಸಬೇಕೆಂಬುದು ಅಚ್ಚುಕಟ್ಟಿನ ಕೊನೆ ಭಾಗದ ರೈತರ ಒತ್ತಾಯವಾಗಿದೆ.