ಶರಣ ಸಂಸ್ಕೃತಿ ಉತ್ಸವದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಶ್ಲ್ಯಾಘನೆ
ಚಿತ್ರದುರ್ಗ, ಅ.24- ಶರಣ ಸಂಸ್ಕೃತಿ ಉತ್ಸವ 2023ರ ಅಂಗವಾಗಿ ಚಿನ್ಮೂಲಾದ್ರಿ ಮೇಲುದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ವೇದಿಕೆಯಲ್ಲಿ ಇಂದು ಸಂಜೆ ಚಿತ್ರದುರ್ಗದ ರಾಜವಂಶಸ್ಥರಿಂದ ಭಕ್ತಿಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಕನಕಪುರದ ಶ್ರೀ ಮರಳೇಗವಿ ಮಠದ ಶ್ರೀ ಚರಮೂರ್ತಿ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಗುರು ಮುಟ್ಟಿದ್ದು ಗುಡ್ಡ ಎನ್ನುತ್ತಾರೆ, ಗುರುಕೃಪೆಯಾದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.
ಬಸವಾದಿ ಶರಣರ ಸಾಲಿನಲ್ಲಿ ಸಾಗುವಂತಹ ಮಠ ಶ್ರೀ ಮುರುಘಾ ಮಠವಾಗಿದೆ. ಗುರುಗಳಿಂದ ರಾಜರು, ಮುರುಗಿ ಸ್ವಾಮಿಗಳ ಕೃಪೆಯಿಂದ ಭರಮಣ್ಣ ನಾಯಕ ರಾಜನಾಗಿದ್ದು ಅವರ ವಂಶಸ್ಥರು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲ್ಯಾಘನೀಯ ಎಂದು ನುಡಿದರು.
ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಮಾತನಾಡಿ, ಮುರುಘಾ ಮಠವು ನೂರಾರು ವರ್ಷಗಳಿಂದ ಸರ್ವಸಮಾಜಕ್ಕೆ ಧಾರ್ಮಿಕ ಸಮಾನತೆಯನ್ನು ನೀಡಿರುವಂತಹ ಪರಂಪರೆಯಿದೆ. ಶ್ರೀಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುಮಠಕಲ್ ಖಾಸಾ ಶ್ರೀ ಮುರುಘಾ ಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ರಾವಂದೂರು ಮುರುಘಾ ಮಠದ ಶ್ರೀ ಮೋಕ್ಷಪತಿ ಮಹಾಸ್ವಾಮೀಜಿ, ಎಸ್.ಜೆ.ಎಂ. ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್ಕುಮಾರ್, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ರಾಜವಂಶಸ್ಥರುಗಳಾದ ಶ್ರೀ ಬಿ.ಎಸ್.ಮದಕರಿ ನಾಯಕ, ಪರಶುರಾಮ ನಾಯಕ ಮತ್ತು ಪಿ.ಕಿರಣ್ ಕುಮಾರ್, ಶ್ರೀ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಗೊಂಚಿಗಾರ್ ಪ್ರಾರ್ಥಿಸಿ, ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು. ಶ್ರೀಮಠದಲ್ಲಿ ಪುಷ್ಪಾಲಂಕೃತ ಕರ್ತೃ ಮುರುಘೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ, ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗು ಶ್ರೀ ಮುರುಘಾಮಠದ ಆಡಳಿತಾಧಿಕಾರಿಗಳಾದ ಶ್ರೀಮತಿ ಬಿ.ಎಸ್.ರೇಖಾ, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್ಕುಮಾರ್, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.