ಹರಿಹರದಲ್ಲಿ ದಸರಾ ಸಂಭ್ರಮ : ಸಾಮೂಹಿಕ ಬನ್ನಿ

ಹರಿಹರದಲ್ಲಿ ದಸರಾ ಸಂಭ್ರಮ : ಸಾಮೂಹಿಕ ಬನ್ನಿ

ಹರಿಹರ, ಅ, 24- ನಗರದಲ್ಲಿ ದಸರಾ ಮಹೋತ್ಸ ವದ ಸಾಮೂಹಿಕ ಬನ್ನಿ ಮುಡಿಯವ ಕಾರ್ಯಕ್ರಮವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ, ಅದ್ಧೂರಿ ಯಾಗಿ ಆಚರಿಸಲಾಯಿತು.

ಶ್ರೀ ಹರಿಹರೇಶ್ವರ ದೇವಾಲಯದ ಮುಂಭಾಗದಲ್ಲಿ ದುರ್ಗಾದೇವಿ ಮೂರ್ತಿಯನ್ನು ಹೊತ್ತ ಆನೆಗೆ ಕಾಲಜ್ಞಾನಿ ಮಠದ ಶ್ರೀ  ಸಿದ್ದಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ, ಸಹೋದರ ಲಿಂಗರಾಜ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ನಗರಸಭೆ ಅಧ್ಯಕ್ಷರಾದ ನಿಂಬಕ್ಕ ಚಂದಾಪೂರ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಬಿ. ವಿನಯಕುಮಾರ್, ಉತ್ಸವ ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್ ಸೇರಿ ದಂತೆ ಅನೇಕ ಗಣ್ಯಮಾನ್ಯರು ಆನೆಗೆ ಪುಷ್ಪವನ್ನು ಹಾಕುವ ಮೂಲಕ ದಸರಾ ಮಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು. 

ಮೆರವಣಿಗೆಯಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿ, ಗ್ರಾಮದೇವತೆ ಊರಮ್ಮ ಸೇರಿದಂತೆ, ನಗರದ ಸುಮಾರು 50 ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು.

ಮೆರವಣಿಗೆ ಶ್ರೀ ಹರಿಹರೇಶ್ವರ ದೇವಾಲಯದ ಮುಂಭಾಗದಿಂದ ಆರಂಭಗೊಂಡು ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ, ಹಳೆ ಪಿ.ಬಿ. ರಸ್ತೆ, ಮುಖಾಂತರ ಸಂಚರಿಸಿ ಸಂಜೆ ಜೋಡು ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ಮಂಟಪಕ್ಕೆ ಅಂತ್ಯಗೊಂಡಿತು. 

ಬನ್ನಿ ಮಹಾಂಕಾಳಿ ದೇವತೆಗೆ ಪಂಡಿತ ನಾರಾ ಯಣ ಜೋಯಿಸರು, ಚಿದಂಬರ ಜೋಯಿಸರು, ಹರಿಶಂಕರ್ ಜೋಯಿಸರ ನೇತೃತ್ವದಲ್ಲಿ, ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಶಾಸಕ ಬಿ.ಪಿ. ಹರೀಶ್ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.  

ಮೆರವಣಿಗೆಯಲ್ಲಿ ರಾಜ್ಯದ ಪ್ರಖ್ಯಾತ ಕಲಾ ತಂಡಗಳಾದ ಹುಬ್ಬಳ್ಳಿ ಜಕ್ಕಲಿಗೆ, ಕೀಲು ಕುದುರೆ, ಡೊಳ್ಳು, ಸಮ್ಮಾಳ, ನಂದಿಕೋಲು, ವೀರಗಾಸೆ, ಮರಗಾಲು, ಜಾಂಜ್ ಪತ್, ನಾದಸ್ವರ, ತಮಟೆ, ಕೋಲಾಟ, ಸ್ಥಬ್ದ ಚಿತ್ರಗಳು, ಸಾರೋಟ್ ಆನೆ ಅಂಬಾರಿ, ಎತ್ತಿನ ಬೆಲ್ಲದ ಬಂಡಿ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಿ ಮೆರವಣಿ ಗೆಗೆ ಮೆರಗನ್ನು ನೀಡಿದವು. ಗಾಂಧಿ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದುರ್ಗಾದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಕಾಲಜ್ಞಾನಿ ಸಿದ್ದಲಿಂಗಸ್ವಾಮಿ ಮಾತನಾಡಿ, ನಾಡಿನಾದ್ಯಂತ ಮಳೆ ಬೀಳದೆ ರೈತರ ಬದುಕು ದುಸ್ತರವಾಗಿದ್ದು, ನಾಡದೇವತೆ ಚಾಮುಂ ಡೇಶ್ವರಿ ಮತ್ತು ದುರ್ಗಾದೇವಿ ಆಶೀರ್ವಾದ ರೂಪದಲ್ಲಿ ಮಳೆ ಚೆನ್ನಾಗಿ ಬರುವ ಮೂಲಕ ಬೆಳೆಗಳು ಚೆನ್ನಾಗಿ ನಾಡಿನ ಜನರ ಬದುಕು ಹಸನಾಗುವಂತಾಗಲಿ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ,  ಹರಿಹರೇಶ್ವರ ಸ್ವಾಮಿ, ಊರಮ್ಮ ದೇವಿಯ ಆಶೀರ್ವಾದದಿಂದ ಮಳೆ ಬೀಳುವ ಮೂಲಕ ರೈತರ ಆರ್ಥಿಕ ವ್ಯವಸ್ಥೆ ಸುಧಾರಣೆ ಆಗುವಂತಾಗಲಿ ಎಂದು ಹೇಳಿದರು.

error: Content is protected !!