ತಂತ್ರಜ್ಞಾನ ದುರ್ಬಳಕೆಯಿಂದ ದಾರಿ ತಪ್ಪುವ ಯುವಕರು

ತಂತ್ರಜ್ಞಾನ ದುರ್ಬಳಕೆಯಿಂದ ದಾರಿ ತಪ್ಪುವ ಯುವಕರು

ರಾಣೇಬೆನ್ನೂರಿನ ಕರ್ನಾಟಕ ಸಂಘದ 87ನೇ ವರ್ಷದ ನಾಡಹಬ್ಬ ಕಾರ್ಯಕ್ರಮದಲ್ಲಿ ಬಿ.ಎಸ್. ಗೌಡರ್

ರಾಣೇಬೆನ್ನೂರು, ಅ.24- ತಂತ್ರಜ್ಞಾನದ ದುರ್ಬಳಕೆಯಿಂದ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ. ಮನೆಯಲ್ಲಿ ಪಾಲಕರು ಉತ್ತಮ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡುವುದು  ಅತೀ ಅವಶ್ಯ ಎಂದು ನಿವೃತ್ತ ಪ್ರಾಚಾರ್ಯ ಬಿ.ಎಸ್. ಗೌಡರ್ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಜರುಗಿದ 87ನೇ ವರ್ಷದ ನಾಡಹಬ್ಬ ಕಾರ್ಯಕ್ರಮದ ಮೂರನೇ ದಿನದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಮೈಸೂರು ಮಹಾರಾಜರು ಕನ್ನಡ ನಾಡಿನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಿಸುತ್ತಾ, ಅಂದಿನ ಅಭಿವೃದ್ಧಿ ಕೆಲಸಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ ಮತ್ತು ಅವುಗಳು ಶಾಶ್ವತವಾಗಿ ಇರಲಿವೆ ಎಂದು ಹೇಳಿದರು.  ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನಿಂದ ಆಗಮಿಸಿದ್ದ ಅಂತರರಾಷ್ಟ್ರೀಯ ಜಾದೂ ಕಲಾವಿದ, ಮೋಡಿ ಆಟಗಾರ ಕಡಬ ಶ್ರೀನಿವಾಸ ಮತ್ತು ತಂಡದವರು ಜಾನಪದ ಶೈಲಿಯಲ್ಲಿ ಅದ್ಬುತವಾಗಿ ಜಾದೂ ಪ್ರದರ್ಶನ ನಡೆಸಿಕೊಟ್ಟರು. ವೀಕ್ಷಕರನ್ನೂ ಕಾರ್ಯಕ್ರಮಗಳಲ್ಲಿ ಬಳಸಿಕೊಂಡು ಅವರಿಂದಲೇ ಮ್ಯಾಜಿಕ್ ಮಾಡಿಸಿದ್ದು ವಿಶೇಷವಾಗಿತ್ತು. ಇವರೊಂದಿಗೆ ಆಗಮಿಸಿದ್ದ ಎಚ್.ಎ.ಎಲ್. ನಿವೃತ್ತ ಅಧಿಕಾರಿ, ಶಿಳ್ಳೆ ಗಾಯಕ ಟಿ. ಆರ್. ಲೋಕೇಶ್ ಹಳೆಯ ಚಲನಚಿತ್ರ ಗೀತೆಗಳನ್ನು ಶಿಳ್ಳೆಯಲ್ಲಿ ಹಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಉಡುಪಿ ಪಾಂಡು ಅವರ ಶಿವತಾಂಡವ ನೃತ್ಯ ವೀಕ್ಷಕರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ದಿತು.

ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು. ಶ್ರೀನಿವಾಸ ಏಕಬೋಟೆ ಸ್ವಾಗತಿಸಿ ದರು. ನಳಿನಿ ನಾಡಿಗೇರ ವಂದಿಸಿದರು. ಸಂಕಪ್ಪ ಮಾರನಾಳ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!