ಮೂರು ತಲೆಮಾರಿನ ‘ಗಟ್ಟಿಂಗ್’ ಪರಿಣಿತರು

ಮೂರು ತಲೆಮಾರಿನ ‘ಗಟ್ಟಿಂಗ್’ ಪರಿಣಿತರು

ದಾವಣಗೆರೆ, ಅ. 24 – ಟೆನ್ನಿಸ್ ಬ್ಯಾಟ್‌ಗಳ ವೈರ್ ಹುರಿಗೊಳಿಸುವ §ಗಟ್ಟಿಂಗ್¬ ಪರಿಣಿತ ಮೊಹಮ್ಮದ್ ರಿಯಾಸ್ ಅಹಮದ್ ಅವರು ಜಿಲ್ಲಾ ಟೆನ್ನಿಸ್ ಕಟ್ಟಡದಲ್ಲಿ ಆಟಗಾರರಿಗೆ ನೆರವಾಗುತ್ತಿದ್ದರು. ನನ್ನ ತಂದೆ ಮಹಬೂಬ್ ಸಾಬ್ 1939ರಲ್ಲಿ ಟೆನ್ನಿಸ್ ಹಾಗೂ ಬ್ಯಾಡ್ಮಿಂಟನ್ ಬ್ಯಾಟ್‌ಗಳಿಗೆ ಗಟ್ಟಿಂಗ್ ಮಾಡುತ್ತಿದ್ದರು. ನಾನು ಆ ವೃತ್ತಿಯಲ್ಲಿ ತೊಡಗಿದೆ. ಈಗ ನನ್ನ ಅಳಿಯ ಮೊಹಮ್ಮದ್ ಖಾನ್ ಸಹ ಇದೇ ವೃತ್ತಿಯಲ್ಲಿದ್ದಾರೆ ಎಂದು ರಿಯಾಸ್ ಅಹಮದ್ ತಿಳಿಸುತ್ತಾರೆ.

ಬಳ್ಳಾರಿ ಮೂಲದ ಪ್ರಸಕ್ತ ಹೈದರಾಬಾದ್‌ನಲ್ಲಿರುವ ಅಹಮದ್, ಅಂತರರಾಷ್ಟ್ರೀಯ ಪಂದ್ಯಾವಳಿ ನಡೆಯುವ ಸ್ಥಳಗಳಿಗೆ ತೆರಳಿ ರಾಕೆಟ್‌ಗಳಿಗೆ ಗಟ್ಟಿಂಗ್ ಹಾಕಿ ಕೊಡುತ್ತಾರೆ. ಈ ಹಿಂದೆ ಕೈಗಳಿಂದ ಗಟ್ಟಿಂಗ್ ಕೆಲಸ ನಡೆಯುತ್ತಿತ್ತು. ಈಗ ಯಂತ್ರ ಬಂದಿದೆ. ಮೊದಲು ಅರ್ಧ ಗಂಟೆಯಲ್ಲಿ ಆಗುತ್ತಿದ್ದ ಕೆಲಸ, ಈಗ 15 ನಿಮಿಷಗಳಲ್ಲಿ ಮುಗಿಯುತ್ತಿದೆ. ತಂತಿಗಳ ಹುರಿಗಟ್ಟುವಿಕೆ ಅತ್ಯಂತ ನಿಖರವಾಗಿರುತ್ತದೆ ಎಂದು ಅಳಿಯ ಮೊಹಮ್ಮದ್ ಖಾನ್ ತಿಳಿಸಿದ್ದಾರೆ.

error: Content is protected !!