ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು

ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮೀಜಿ ಕರೆ

ಹರಪನಹಳ್ಳಿ, ಅ.20- ಸಂಸದ ವೈ.ದೇವೇಂದ್ರಪ್ಪನವರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಅವರ ಆದರ್ಶ ಜೀವನ ಸಮಾಜಕ್ಕೆ ಮಾದರಿ ಎಂದು ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮೀಜಿ ಶ್ಲ್ಯಾಘಿಸಿದರು.

ವೈ.ಡಿ.ಅಣ್ಣಪ್ಪ ಅವರು ಬಿಡಿಸಿಸಿ ಬ್ಯಾಂಕಿನ   ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ಯುವ ಮುಖಂಡ ಪ್ರಶಾಂತ್ ಪಾಟೀಲರ 44ನೇ ಹುಟ್ಟುಹಬ್ಬದ ಪ್ರಯುಕ್ತ   ಅರಸೀಕೆರೆ ಗ್ರಾಮದ ಶ್ರೀ ಕೋಲಶಾಂತೇಶ್ವರ ಮಠದಲ್ಲಿ ವೈ.ಡಿ.ಅಣ್ಣಪ್ಪ ಹಾಗೂ ಪ್ರಶಾಂತ್ ಪಟೇಲ್ ಅಭಿಮಾನಿ ಬಳಗ, ಶ್ರೀ ಕೋಲಶಾಂತೇಶ್ವರ ಜನ ಕಲ್ಯಾಣ ಕೇಂದ್ರ, ಕಿಚ್ಚ ಸುದೀಪ್ ಅಭಿಮಾನಿ ಬಳಗದಿಂದ ಇಂದು ಏರ್ಪಡಿಸಿದ್ದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಈ ಮಠದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಟೇಲ್ ಹಾಗೂ ಎನ್.ಕೊಟ್ರೇಶ್‌ರವರಿಂದ ಯಶಸ್ವಿಯಾಗಿ ನಡೆಯುತ್ತವೆ ಎಂದ ಅವರು, ಈ ಮೂವರಿಗೂ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇದೆ ಎಂದು ಶ್ರೀಗಳು ಆಶೀರ್ವದಿಸಿದರು. 

ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರು ಅಧಿಕಾರ ಶಾಶ್ವತವಲ್ಲ, ನಾವು ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಮಳೆಯಿಲ್ಲದೆ ಬರಗಾಲ ಬಂದಿದೆ, ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತಹ ಕೆಲಸವಾಗಬೇಕು. ಪಕ್ಷ ಯಾವುದೇ ಇರಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಬಿಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ಪ್ರಶಾಂತ್ ಪಟೇಲ್‌ ನನ್ನ ಬಾಲ್ಯದ ಗೆಳೆಯ, ಯಾವುದೇ ಕೆಲಸಗಳಿರಲಿ ನಾವಿಬ್ಬರೂ ಜೊತೆಗೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಸದಾ ಹೀಗೆ ಶ್ರೀಗಳ ಆಶೀರ್ವಾದ, ಅಭಿಮಾನಿಗಳ ಸಹಕಾರ ನಮ್ಮ ಮೇಲಿರಲಿ ಎಂದು ಹೇಳಿದರು.

ಮಹೇಶ್ ಇವೆಂಟ್ಸ್ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯೆ ವೈ.ಡಿ.ಸುಶೀಲಮ್ಮ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯೆ ವಿಶಾಲಾಕ್ಷಮ್ಮ, ಲಕ್ಷ್ಮಿದೇವಿ ಅಣ್ಣಪ್ಪ, ಶ್ವೇತ ಪ್ರಶಾಂತ್ ಪಟೇಲ್, ಶಾಂತ ಕುಮಾರ್, ಚಂದನ, ಮಿಂಚು, ಪ್ರೀತಮ್, ಸಾನ್ವಿ, ವೈಷ್ಣವಿ, ವೈಭವ್, ವೈಶಾಖ್, ಸುನೀತಾ ಶಾಂತಕುಮಾರ್, ಉಪನ್ಯಾಸಕ ದುರುಗೇಶ್, ಪೂಜಾರ್ ಮರಿಯಪ್ಪ, ರೇಖಾ ಕೊಟ್ರೇಶ್, ಕಿಚ್ಚ ಸುದೀಪ್ ಸಂಘದ ಜಿಲ್ಲಾಧ್ಯಕ್ಷ ಹಾದಿಮನಿ ಸಂತೋಷ್, ಬಾಲೇನಹಳ್ಳಿ ಕೆಂಚನಗೌಡ, ಜೆ.ಪರಶುರಾಮ್, ಎ.ಹೆಚ್.ನವೀನ್, ಯೋಗೇಶ್, ಶಿವು, ಸುನೀಲ್, ಹರಿಯಮ್ಮನಹಳ್ಳಿ ಮಾಲತೇಶ್, ಶಶಿಕುಮಾರ್, ಕೊಟ್ರೇಶ್, ಸಿದ್ದೇಶ್ ಇದ್ದರು.

error: Content is protected !!