ಮಲೇಬೆನ್ನೂರು, ಅ.18- ಪಟ್ಟಣದ ಹೊರವಲಯ ದಲ್ಲಿರುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಮಹಿಳೆಯರು ಸಾಮೂಹಿಕ ಲಲಿತ ಸಹಸ್ರ ನಾಮಾವಳಿಯನ್ನು ಪಠಣ ಮಾಡಿದರು. ಮಲೇಬೆನ್ನೂರಿನ ವಾಸವಿ ಮಹಿಳಾ ಮಂಡಳಿ, ಕಾಳಿ ಕಾಂಬ ಸ್ತ್ರೀ ಶಕ್ತಿ ಸಂಘ, ಗೆಳೆತಿಯರ ಬಳಗ, ಶ್ರೀನಿಧಿ ಮಹಿಳಾ ಸಂಘ, ಶ್ರೀ ವೀರಭದ್ರೇಶ್ವರ ಟ್ರಸ್ಟ್ ಮಹಿಳಾ ಮಂಡಳಿ ಮತ್ತು ಕೊಮಾರನ ಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಮಹಿಳಾ ಭಜನಾ ಮಂಡಳಿ, ಕೊಕ್ಕನೂರು ಹಾಗೂ ಹಾಲಿವಾಣ ಗ್ರಾಮಗಳ ವಾಸವಿ ಮಹಿಳಾ ಸಂಘ ಮತ್ತು ಹರಿಹರದ ವಾಸವಿ ಪ್ರಣತಿ ಮಂಡಳಿಯ ಸದಸ್ಯರು ಸೇರಿದಂತೆ ಕೊಮಾರನಹಳ್ಳಿ, ಕುಂಬಳೂರು, ಜಿಗಳಿಯ ಮಹಿಳೆಯರೂ ಈ ಲಲಿತ ಸಹಸ್ರ ನಾಮವಳಿ ಪಠಣದಲ್ಲಿ ಪಾಲ್ಗೊಂಡಿದ್ದರು.
ಮಲೇಬೆನ್ನೂರು : ಸಾಮೂಹಿಕ ಲಲಿತ ಸಹಸ್ರ ನಾಮವಳಿ ಪಠಣ
