ಭರಮಸಾಗರದಲ್ಲಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ
ಭರಮಸಾಗರ, ಅ.18- ರಾಜ್ಯದಲ್ಲಿ ಬರದ ಪರಿಸ್ಥಿತಿ ನಿಭಾಯಿಸುವಲ್ಲಿ ಮುಂದಾಗಿದ್ದು, ಹಿಂದುಳಿದ ವರ್ಗ ಮತ್ತು ಮಧ್ಯಮ ವರ್ಗದ ಜನರು ನೆಮ್ಮದಿಯ ಜೀವನ ನಡೆಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ಭರಮಸಾಗರದಲ್ಲಿ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇಲಾಖೆಯಲ್ಲಿ ಬಹಳ ದಿನದಿಂದ ಭ್ರಷ್ಟಾಚಾರ ನಡೆಯುತ್ತಿದೆ ಅದಕ್ಕೆ ಹಂತ ಹಂತವಾಗಿ ಕಡಿವಾಣ ಹಾಕಿ ಸುಧಾರಣೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಜನತೆ ಖುಷಿಯಾಗಿದ್ದಾರೆ.
ಗ್ರಾಮ ಪಂಚಾಯ್ತಿಗೆ ಒಂದರಂತೆ ಹೊಸದಾಗಿ ಬಾರ್ ತೆರೆಯಲು ಅಧಿಕಾರಿಗಳ ಹತ್ತಿರ ಚರ್ಚೆ ಮಾಡಲಾಗಿತ್ತು ಸುಮಾರು 50-60 ಬಾರ್ ಲೈಸನ್ಸ್ ಬೇನಾಮಿಯಾಗಿ ನಡೆಯುತ್ತಿವೆ. ಹೊಸದಾಗಿ ಮದ್ಯದ ಅಂಗಡಿ ತೆರೆಯಲು ಅನುಮತಿ ಕೊಡುವುದಿಲ್ಲ ಎಂದು ಮುಖ್ಯ ಮಂತ್ರಿಗಳೇ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಲಾಪುರ್, ಕೆ.ಪಿ.ಸಿ.ಸಿ ಸದಸ್ಯ ಹೆಚ್.ಎನ್ ತಿಪ್ಪೇಸ್ವಾಮಿ, ಮುಖಂಡರಾದ ಎಮ್ಮೆಹಟ್ಟಿ ಆರ್ ಕೃಷ್ಣಮೂರ್ತಿ, ನಾಗೇಂದ್ರಪ್ಪ, ಶಮೀಮ್ ಪಾಷ, ಓಬಜ್ಜ, ಸಿ.ಟಿ ಮಹಾಂತೇಶ್, ಅಬ್ಬಾಸ್ ಹಫೀಜ್, ಪ್ರಕಾಶ್, ರಘು ಟಿ.ಆರ್ ಚನ್ನೇಶ್, ಹೆಚ್.ಎನ್. ನೀಲಪ್ಪ ವೆಂಕಟೇಶ್, ಲಿಂಗರಾಜ್, ಕೆ.ಟಿ.ಸಿ ಮಂಜು, ಶ್ರೀನಿವಾಸ್, ಸಂತೋಷ್, ಪತ್ರಕರ್ತ ಬಿ.ಜೆ ಅನಂತಪದ್ಮನಾಭರಾವ್, ಶಿವಪ್ರಸಾದ್, ರಾಜು, ಮಂಜಣ್ಣ, ಕರಿಬಸಪ್ಪ ಮತ್ತಿತರರು ಹಾಜರಿದ್ದರು.