ಮಲೇಬೆನ್ನೂರು, ಅ.18- ಪಟ್ಟಣದಲ್ಲಿ ಹಾಯ್ದು ಹೋಗಿರುವ ಎಸ್.ಹೆಚ್.ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಡಾಂಬರೀಕರಣ ಮಾಡುವ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆದಿದ್ದು, ದುರಸ್ಥಿ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮಾಡದೇ ಅರ್ಧಬರ್ಧ ಕೆಲಸ ಮಾಡುತ್ತಿದ್ದಾರೆ. ಬುಧವಾರ ಕುಂಬಳೂರು ಬಳಿ ಹೆದ್ದಾರಿಯಲ್ಲಿ ಒಂದು ಗುಂಡಿಗೆ ಡಾಂಬರ್ ಹಾಕಿದರೆ, ಇನ್ನೊಂದು ಗುಂಡಿಯನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂದು ಕುಂಬಳೂರು ಗ್ರಾಮಸ್ಥರು ದೂರಿದ್ದಾರೆ.
ಹೆದ್ದಾರಿ ದುರಸ್ತಿ ಬಗ್ಗೆ ಅಸಮಾಧಾನ
