ಹೂವಿನಹಡಗಲಿ, ಅ.16- ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯು ಭಾನು ವಾರ ಬ್ಯಾಂಕಿನ ಆವರಣ ದಲ್ಲಿ ಜರುಗಿತು. ತೀವ್ರ ಕುತೂಹಲ ಕೆರಳಿಸಿದ್ದ ಹಡಗಲಿ ಕ್ಷೇತ್ರದಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ವಿರುದ್ದ ಚಿದಾ ನಂದ ಐಗೋಳ್ ಒಂದು ಮತದ ಅಂತರದಿಂದ ಜಯ ಸಾಧಿಸಿದ್ದಾರೆ.
ಕೆ.ಎಂ.ಎಫ್ ಅಧ್ಯಕ್ಷ ಎಲ್.ಪಿ.ಬಿ. ಭೀಮಾ ನಾಯಕ್ ಕೂಡ ಜಯ ಗಳಿಸಿದರೆ, ಶಾಸಕರಾದ ಲತಾ ಮಲ್ಲಿಕಾರ್ಜುನ್ ವಿಜಯಶಾಲಿಯಾಗಿದ್ದಾರೆ. ಅರ್ಬನ್ ಸಹಕಾರ ಬ್ಯಾಂಕುಗಳಿಂದ ನಡೆದ ಚುನಾವಣೆಗೆ ಕಿತ್ತೂರು ರಾಣಿ ಚೆನ್ನಮ್ಮ ಬ್ಯಾಂಕಿನ ಅಧ್ಯಕ್ಷ ಪಿ.ವಿಶ್ವನಾಥ್ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಜೆ. ಮಂಜುನಾಥ್ ಮತ್ತು ಕೋಳೂರು ಮಲ್ಲಿ ಕಾರ್ಜುನಗೌಡ ಪರಾಭವಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಬಿಡಿಸಿಸಿ ಬ್ಯಾಂಕಿನ ಚುನಾವಣೆ ರಂಗು ಪಡೆದಿದ್ದು ವಿಶೇಷ. ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡ ಳಿಗೆ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಿಂದ ಆಯ್ಕೆಯಾದವರ ತಾಲ್ಲೂಕು ವಿವರ. ಹೊಸ ಪೇಟೆ: ಎಸ್.ಎಲ್.ಆನಂದ್, ಕಂಪ್ಲಿ: ಪಿ.ಮುಕ್ಕಯ್ಯ ಸ್ವಾಮಿ, ಹಗರಿಬೊಮ್ಮನಹಳ್ಳಿ : ಎಲ್.ಪಿ.ಬಿ. ಭೀಮಾ ನಾಯ್ಕ್, ಹಡಗಲಿ: ಚಿದಾ ನಂದ ಐಗೋಳ್, ಕೊಟ್ಟೂರು: ಐ.ದ್ವಾರ ಕೇಶ್, ಹರಪನಹಳ್ಳಿ: ವೈ. ಅಣ್ಣಪ್ಪ, ಬಳ್ಳಾರಿ: ಬಿ.ನವೀನ ರೆಡ್ಡಿ, ಕುರಗೋಡು: ಹುಲುಗಪ್ಪ ನಾಯಕ್ ಚುನಾಯಿತರಾಗಿದ್ದಾರೆ.
ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ವಿ.ಆರ್.ಸಂದೀಪ್ ಸಿಂಗ್, ಪತ್ತಿನ ಮತ್ತು ಅರ್ಬನ್ ಬ್ಯಾಂಕುಗಳ ಕ್ಷೇತ್ರದಿಂದ ಪಿ.ವಿಶ್ವನಾಥ್, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಶಾಸಕರಾದ ಲತಾ ಮಲ್ಲಿಕಾರ್ಜುನ್ ವಿಜೇತರಾಗಿದ್ದಾರೆ.