ಹರಿಹರದಲ್ಲಿ ‘ನವರಾತ್ರಿ’ ಕಾರ್ಯಕ್ರಮಗಳಿಗೆ ಚಾಲನೆ

ಹರಿಹರದಲ್ಲಿ ‘ನವರಾತ್ರಿ’ ಕಾರ್ಯಕ್ರಮಗಳಿಗೆ ಚಾಲನೆ

ಹರಿಹರ, ಅ.15- ನಗರದಲ್ಲಿ ದಸರಾ ಮಹೋತ್ಸವದ ವಿವಿಧ ಪೂಜಾ ಕಾರ್ಯಗಳಿಗೆ ಶಾಸಕ ಬಿ.ಪಿ. ಹರೀಶ್, ದುರ್ಗಾ ಮಾತೆಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಈ ವೇಳೆ ಮಾತನಾಡಿದ ಅವರು, ನಾಡಿನ ಜನರ ಒಳಿತಿಗಾಗಿ 10 ದಿನಗಳ ಕಾಲ ದುರ್ಗಾ ಮಾತೆಗೆ ವಿಶೇಷ ಪೂಜೆಯನ್ನು ಮಾಡಿ, ದೇವಿಯ ಆರಾಧನೆ ಮಾಡುವ ಮೂಲಕ ನಾಡಿನಾದ್ಯಂತ ಒಳ್ಳೆಯ ಮಳೆ ಬಂದು, ಬೆಳೆಗಳು ಚೆನ್ನಾಗಿ ಬರಲಿ, ಇದರಿಂದಾಗಿ ಜನತೆಯ ಬಾಳು ಸಂತೋಷದಿಂದ ಕೂಡಿರಲಿ ಎಂದು ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ, ಪ್ರತಿ ದಿನ ನಡೆಯುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ನಾರಾಯಣ ಜೋಯಿಸರು, ಹರಿಶಂಕರ್ ಜೋಯಿಸರು, ಚಿದಂಬರಂ ಜೋಯಿಸರು, ಲಕ್ಷ್ಮಿಕಾಂತ ಜೋಯಿಸರು, ಉತ್ಸವ ಸಮಿತಿಯ ಮಹಾದೇವಪ್ಪ ಗೌಡ್ರು, ಟಿ.ಜೆ. ಮುರುಗೇಶಪ್ಪ, ಬಸವರಾಜ್ ಪಾಟೀಲ್, ಶ್ರೀಮತಿ ನಾಗಮಣಿ ಶಾಸ್ತ್ರಿ, ಡಿ. ರೇವಣಸಿದ್ದಪ್ಪ ಅಮರಾವತಿ, ಎ.ಬಿ. ವಿಜಯಕುಮಾರ್, ಅಜಿತ್ ಸಾವಂತ್, ಕರಿಬಸಪ್ಪ ಕಂಚಿಕೇರಿ, ಐರಣಿ ನಾಗರಾಜ್, ಶಿವಪ್ರಕಾಶ್ ಶಾಸ್ತ್ರಿ, ರಾಘವೇಂದ್ರ ದೀಕ್ಷಿತ್, ಕೆ.ಬಿ. ರಾಜಶೇಖರ್, ಚಂದನ್ ಮೂರ್ಕಲ್, ಅಂಬಾಸಾ ಹಂಸಾಗರ್, ಶ್ರೀನಿವಾಸ್ ಮೆಹರ್ವಾಡೆ, ಧರಣೇಂದ್ರ ಪಿ, ಪ್ರಕಾಶ್ ಶ್ರೇಷ್ಟಿ, ಹೆಚ್. ಬಸವರಾಜಪ್ಪ ಹಲಸಬಾಳು, ರಾಜು ಕಿರೋಜಿ, ಶ್ರೀನಿವಾಸ್ ಚಂದಪೂರ್ ಮತ್ತು ಇತರರು ಹಾಜರಿದ್ದರು.

error: Content is protected !!